ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ 2020-2021 ನೇ ಸಾಲಿನ ಪ್ರಥಮ ಪದವಿ ತರಗತಿಗಳ ಪ್ರವೇಶಕ್ಕಾಗಿ ನೋಂದಣಿ ಆರಂಭ

Advt_Headding_Middle
Advt_Headding_Middle

 

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ) ಇದರ ವತಿಯಿಂದ ನಡೆಸಲ್ಪಡುತ್ತಿರುವ ಮಾತೃ ಸಂಸ್ಥೆ ಮತ್ತು ಹೊಸ ನಿಯಮಾವಳಿ ಪ್ರಕಾರ ನ್ಯಾಕ್ ನಿಂದ ಬಿ+ ಮಾನ್ಯತೆ ಪಡೆದಿರುವ  ಕಾಲೇಜು ಸುಳ್ಯ,ಇದರ 2020-2021ನೇ ಶೈಕ್ಷಣಿಕ ವರ್ಷದ ಪ್ರಥಮ ಪದವಿ ತರಗತಿಗಳ ಪ್ರವೇಶಕ್ಕಾಗಿ ನೋಂದಣಿ ಆರಂಭವಾಗಿದೆ.
ಪದವಿ ತರಗತಿಗಳಿಗೆ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ಇಲ್ಲಿ ಸಂಯೋಜನೆ ಗೊಂಡಿರುವ ಕಲೆ, ಬಿ.ಎಸ್.ಡಬ್ಲ್ಯು, ವಿಜ್ಞಾನ, ವಾಣಿಜ್ಯ ಮತ್ತು ಬಿ.ಬಿ.ಎ ವಿಷಯಗಳಿಗೆ ಸಂಬಂಧಿ ನೋಂದಾಣಿ ಮಾಡಿಕೊಳ್ಳಲು ಅವಕಾಶವಿದೆ.

ಅನುಭವಿ ಮತ್ತು ವಿಶೇಷ ಅರ್ಹತೆ ಹೊಂದಿದ ಅಧ್ಯಾಪಕ ವೃಂದ,ವಿಜ್ಞಾನ ವಿದ್ಯಾರ್ಥಿಗಳಿಗೆ ವ್ಯವಸ್ಥಿತ ಪ್ರಯೋಗಲಯ ಹಾಗೆಯೇ ಎಲ್ಲಾ ವಿದ್ಯಾರ್ಥಿಗಳಿಗೂ ಅನ್ವಯವಾಗುವ ಆಧುನಿಕ ತಂತ್ರ ಜ್ಞಾನಗಳನ್ನೊ ಗೊಂಡ ಗ್ರಂಥಾಲಯ,ಇಂಗ್ಲೀಷ್ ಲಾಂಗ್ವೇಜ್ ಲ್ಯಾಬ್, ಎನ್.ಎಸ್.ಎಸ್, ಯೂತ್ ರೆಡ್ ಕ್ರಾಸ್,ರೊವರ್ಸ್ &ರೇಂಜರ್ಸ್ ಘಟಕಗಳು ಮತ್ತು ತಾಲೂಕಿನಲ್ಲಿಯೇ ಎನ್.ಸಿ.ಸಿ ಘಟಕವನ್ನು ಹೊಂದಿರುವ ಏಕೈಕ ಕಾಲೇಜಾಗಿರುವ ಇಲ್ಲಿ ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವ ವ್ಯವಸ್ಥೆಯೂ ಇದೆ.ಅಲ್ಲದೆ ಗಡಿನಾಡು ಮತ್ತು ದೂರದ ಗ್ರಾಮೀಣ ಭಾಗಗಳಿಂದ ಬರುವ ವಿದ್ಯಾರ್ಥಿಗಳಿಗಾಗಿ ಕಾಲೇಜಿನ ವತಿಯಿಂದ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗುತ್ತದೆ.

Adervitsment

 

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿದಂತೆ ನಾಲ್ಕು ದಶಕಗಳಿಗಿಂತ ಮೇಲ್ಪಟ್ಟ ಕಾಲಾವಧಿಯಿಂದ ಶೈಕ್ಷಣಿಕ ಸೇವೆಯನ್ನು ನೀಡುತ್ತಾ ಬಂದಿರುವ ಕಾಲೇಜಿನಲ್ಲಿ ಶಿಕ್ಷಣ ಪಡೆಯುವ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ಕಾಲೇಜಿನ ಪ್ರಕಟನೆಯಲ್ಲಿತಿಳಿಸಲಾಗಿದೆ.
ಕೋವಿಡ್ -19 ಲಾಕ್ ಡೌನ್ ಕಾರಣದಿಂದಾಗಿ ನೇರ ಕಾಲೇಜಿಗೆ ಭೇಟಿಕೊಡಲು ಅಸಾಧ್ಯವಾಗುತ್ತಿರುವುದರಿಂದ ವಿದ್ಯಾರ್ಥಿಗಳು ಕಾಲೇಜಿನ ವೆಬ್ ಸೈಟ್

www.kvgnmc.org  ಇದರ ಮೂಲಕ online ನೋಂದಣಿ ಮಾಡಿಕೊಳ್ಳಬಹುದು.ಅಲ್ಲದೆ 8762540751/7353756487 ಸಂಖ್ಯೆಗಳನ್ನು ನೇರ ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.