ಮೊಗರ್ಪಣೆ : ಸೇತುವೆಯ ಎಕ್ಸ್‌ಪಾನ್ಶನ್ ಜಾಯಿಂಟ್ ಗುಂಡಿಗೆ ಅಸ್ತ್ರ ಪೈಚಾರ್ ವತಿಯಿಂದ ಕಾಂಕ್ರೀಟಿಕರಣ

Advt_Headding_Middle
Advt_Headding_Middle

 

ಗಡ್ಕ್ ಗಡ್ಕ್ ಗೆ ತಾತ್ಕಾಲಿಕ ಮುಕ್ತಿ

ಸುಳ್ಯದ ಮೊರ್ಗಪಣೆ ಸೇತುವೆಯ ಮೇಲ್ಬಾಗದ ರಸ್ತೆಯ ಎರಡು ಕಡೆಗಳಲ್ಲಿ ಸೇತುವೆಯ ಎಕ್ಸ್‌ಪಾನ್ಶನ್ ಜಾಯಿಂಟ್ ಇರುವಲ್ಲಿ ಗುಂಡಿಗಳು ಬಿದ್ದಿದ್ದು, ಇದರಿಂದ ದ್ವಿಚಕ್ರ ಸೇರಿದಂತೆ ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು.


Advertisement

ಕಳೆದ ನಾಲ್ಕು ತಿಂಗಳ ಹಿಂದೆ ಹೆದ್ದಾರಿ ರಸ್ತೆ ಡಾಮರೀಕರಣ ಮಾಡುವ ವೇಳೆ ಸೇತುವೆಯ ಮೇಲ್ಭಾಗದಲ್ಲಿ ಡಾಮರೀಕರಣ ಮಾಡಲಾಗಿತ್ತು. ಆದರೆ ಇದೀಗ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ರಸ್ತೆಯ ಎರಡು ಕಡೆಗಳಲ್ಲಿ ಸೇತುವೆಯ ಜಾಯಿಂಟ್ ಇರುವಲ್ಲಿ ಡಾಮರ್ ಎದ್ದು ಗುಂಡಿಗಳು ಬಿದ್ದಿವೆ. ಇದರಿಂದಾಗಿ ವಾಹನ ಸಾಗುವಾಗ ಗಡ್ಕ್ ಗಡ್ಕ್ ಎಂದು ಗುದ್ದಿ ಹೋಗುತ್ತಿತ್ತು.

 



Advertisementಮಾಣಿ-ಮೈಸೂರು ರಾಜ್ಯ ಹೆದ್ದಾರಿಯಾಗಿರುವುದರಿಂದ ಈ ರಸ್ತೆಯಲ್ಲಿ ಜಿಲ್ಲೆ, ತಾಲೂಕುಗಳ ಸಾರ್ವಜನಿಕರು ದಿನನಿತ್ಯ ಓಡಾಡುವ ರಸ್ತೆಯಾಗಿರುವುದರಿಂದ ಇದಕ್ಕೆ ತಾತ್ಕಾಲಿಕ ಪರಿಹಾರವಾಗಿ ಪೈಚಾರ್ ಅಸ್ತ್ರ ಸ್ಪೋರ್ಟ್ಸ್ ಆರ್ಟ್ಸ್ ಕ್ಲಬ್ ವತಿಯಿಂದ ಜು.೧೯ ರಂದು ಗುಂಡಿಗೆ ಕಾಂಕ್ರೀಟ್ ಹಾಕುವುದರ ಮೂಲಕ ಮುಚ್ಚಿ ಶ್ರಮದಾನ ಮಾಡಿದರು. ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಸದಸ್ಯರಾದ ಆರ್.ಬಿ ಬಶೀರ್, ರಿಫಾಯಿ ಅಸ್ತ್ರ ಟ್ರಾನ್ಸ್‌ಪೋರ್ಟ್, ಶಾಲಿ ರೋಯಲ್, ಮುಜೀಬ್ ಪೈಚಾರ್, ನಾಶೀರ್ ಕೆ.ಪಿ,ಅಶ್ರಫ್ ಇರುವಂಬಳ್ಳ,ಹರ್ಷದ್,ಫಲಾಲುದ್ದೀನ್,ಹಸೈನ್, ಶಮೀರ್ ಕಾಂಕ್ರೀಟ್ ಕೆಲಸ ಮಾಡಿದರು.

Advertisement
ಇದು ಶಾಶ್ವತ ಪರಿಹಾರ ಅಲ್ಲ. ಸ್ವಲ್ಪ ದಿನದ ಮಟ್ಟಿಗೆ ಯಾವುದೇ ಸಮಸ್ಯೆ ಇಲ್ಲದೇ ಓಡಾಡಬಹುದು. ಶಾಶ್ವತ ಪರಿಹಾರದ ಬಗ್ಗೆ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಗಮನ ಹರಿಸುವುದು ಒಳ್ಳೆಯದು.

-ರಿಫಾಯಿ ಅಸ್ತ್ರ ಟ್ರಾನ್ಸ್ ಪೋರ್ಟ್
ನಮಗೆ ವಾಹನಗಳಲ್ಲಿ ಓಡಾಟಕ್ಕೆ ತುಂಬಾ ಕಷ್ಟವಾಗುತ್ತಿತ್ತು. ಅದನ್ನು ಮನಗಂಡು ನಮ್ಮ ಅಸ್ತ್ರ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಲಾಕ್‌ಡೌನ್ ವತಿಯಿಂದ ತಾತ್ಕಾಲಿಕ ಪರಿಹಾರವಾಗಿ ಕಾಂಕ್ರೀಟಿಕರಣ ಮಾಡುವ ಕಾರ್ಯ ಹಮ್ಮಿಕೊಂಡಿದೆ. ಇದಕ್ಕೆ ಅಸ್ತ್ರ ಸ್ಫೋರ್ಟ್ಸ್ ಕ್ಲಬ್‌ನ ರಿಫಾಯಿ ಹೊಯಿಗೆ, ಜಲ್ಲಿ , ಸಿಮೆಂಟ್ ಕೊಡುಗೆಯಾಗಿ ನೀಡಿದ್ದಾರೆ.
-ಆರ್.ಬಿ.ಬಶೀರ್, ಪೈಚಾರ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.