ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣದ ಆಶಾಕಿರಣ ಕೆ.ವಿ.ಜಿ. ಐ.ಟಿ.ಐ ಸುಳ್ಯ

Advt_Headding_Middle
Advt_Headding_Middle

ಆಧುನಿಕ ಸುಳ್ಯದ ನಿರ್ಮಾತೃ ಪೂಜ್ಯ ಡಾ.ಕುರುಂಜಿ ವೆಂಕಟ್ರಮಣ ಗೌಡರ ವಿವಿಧ ಶಿಕ್ಷಣ ಸಂಸ್ಥೆಗಳನ್ನು ಸುಳ್ಯದಲ್ಲಿ ಸ್ಥಾಪಿಸುವ ಮಹತ್ವಾಕಾಂಕ್ಷೆಯ ಫಲವಾಗಿ 1986 ರಲ್ಲಿ ಕೆ.ವಿ.ಜಿ ಐ.ಟಿ.ಐ ಯು ಸ್ಥಾಪನೆಗೊಂಡಿತು.

ಈ ಭಾಗದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣದ ಕನಸನ್ನು ಕಳೆದ 34 ವರ್ಷಗಳಿಂದ ಈ ಸಂಸ್ಥೆಯು ನನಸುಗೊಳಿಸುತ್ತಾ ಬಂದಿರುತ್ತದೆ. ಎ.ಒ.ಎಲ್.ಇ(ರಿ) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ.ರೇಣುಕಾಪ್ರಸಾದ್ ಕೆ.ವಿಯವರ ವಿಶೇಷ ಮುತುವರ್ಜಿಯಿಂದ ಈ ಸಂಸ್ಥೆಯು ನವೀಕರಣಗೊಂಡು ರಾಜ್ಯದಲ್ಲಿಯೇ ಮುಂಚೂಣಿ ಸಂಸ್ಥೆಯಾಗಿ ರೂಪುಗೊಂಡಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ವೃತ್ತಿಶಿಕ್ಷಣ ಪರಿಷತ್ತಿನ ಶಾಶ್ವತ ಸಂಯೋಜನೆಯನ್ನು ಪಡೆದ ಈ ಸಂಸ್ಥೆಯ ರಾಜ್ಯ ಸರ್ಕಾರದ ಅನುದಾನವನ್ನೂ ಪಡೆಯುತ್ತಿದೆ.
ಪ್ರಸ್ತುತ ಸಂಸ್ಥೆಯಲ್ಲಿ ಎಲೆಕ್ಟಿಷಿಯನ್, ಎಲೆಕ್ಟ್ರೋನಿಕ್ಸ್ ಮತ್ತು ಮೆಕ್ಯಾನಿಕ್ ಮೋಟಾರು ವಾಹನ ಎಂಬ ಎರಡು ವರ್ಷಗಳ ಮೂರು ವೃತ್ತಿಗಳಲ್ಲಿ ಉತ್ತಮ ಗುಣಮಟ್ಟದ ತರಬೇತಿಯನ್ನು ನೀಡಲಾಗಿತ್ತಿದೆ. ಪ್ರತೀ ವೃತ್ತಿಗೂ ಆಧುನಿಕ ಯಂತ್ರೋಪಕರಣಗಳನ್ನೊಳಗೊಂಡ ಸುಸಜ್ಜಿತ

Advertisement

ಕಾರ್ಯಗಾರಗಳಿರಿತ್ತವೆ. ಪ್ರತಿಯೊಂದು ವಿಷಯಕ್ಕೂ ಇಪ್ಪತ್ತು ವರ್ಷಗಳಿಗೂ ಮೇಲ್ಪಟ್ಟ ಅನುಭವವಿರುವ ಬೋಧಕ ಸಿಬ್ಬಂದಿಯಿದ್ದು, ಪ್ರತೀ ವರ್ಷವೂ ಶೇಕಡಾ 90ಕ್ಕಿಂತ ಅಧಿಕ ಫಲಿತಾಂಶ ಬರುತ್ತಿದೆ. ಅಂತಿಮ ಪರೀಕ್ಷೆಯಲ್ಲಿ ರ್‍ಯಾಂಕ್‌ಗಳನ್ನು ಕೊಡುವ ಪದ್ದತಿಯಿದ್ದ ಸಮಯದಲ್ಲಿ ಕೇವಲ ಹತ್ತು ವರ್ಷಗಳಲ್ಲಿ 33 ರ್‍ಯಾಂಕ್‌ಗಳು ಸಂಸ್ಥೆಗೆ ಲಭಿಸಿರುತ್ತದೆ. ಅವುಗಳಲ್ಲಿ 3 ರಾಜ್ಯಮಟ್ಟದ ಪ್ರಥಮ ರ್‍ಯಾಂಕ್‌ಗಳಾಗಿವೆ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಸಂಸ್ಥೆಯಲ್ಲಿ ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್ ನಿರ್ಮಿಸಿದ್ದು ನುರಿತ ಶಿಕ್ಷಕರಿಂದ ತರಬೇತಿಯನ್ನು ನೀಡಲಾಗಿತ್ತಿದೆ. ಕೋವಿಡ್ 19 ಮಹಾಮಾರಿಯ ಈ ಸಂಧರ್ಭದಲ್ಲಿಯೂ ಆನ್‌ಲೈನ್ ಮುಖಾಂತರ ತರಬೇತಿಯನ್ನು ನೀಡಲಾಗುತ್ತಿದೆ. ಸಂಸ್ಥೆಯಿಂದ ಯಶಸ್ವಿಯಾಗಿ ಹೊರಬರುವ ವಿದ್ಯಾರ್ಥಿಗಳಿಗೆ ಭಾರತ ಸರ್ಕಾರದಿಂದ ನೀಡಲಾಗುವ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರವು ದೇಶ ವಿದೇಶಗಳಲ್ಲಿ ಮಾನ್ಯತೆ ಹಾಗೂ ಬೇಡಿಕೆ ಇರುವಂತಹದ್ದಾಗಿದೆ.

Adervitsment
ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ದೇಶ ಹಾಗೂ ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಾದ ಇಸ್ರೋ, ಬಿ.ಇ.ಎಮ್.ಎಲ್, ಬಿ.ಎಚ್.ಇ.ಎಲ್, ಬಿ.ಇ.ಎಲ್, ಭಾರತೀಯ ರೈಲ್ವೇ, ಕೊಂಕಣ್ ರೈಲ್ವೇ, ಕೆ.ಎಸ್.ಆರ್.ಟಿ.ಸಿ, ವಿದ್ಯುತ್ ಸರಬರಾಜು ಕಂಪೆನಿಗಳು, ಕಿರ್ಲೋಸ್ಕರ್, ಟೋಯೋಟ, ಸೋನಿ ಮುಂತಾದವುಗಳಲ್ಲಿ ಉದ್ಯೋಗಿಗಳಾಗಿರುತ್ತರೆ. ಹಲವಾರು ವಿದ್ಯಾರ್ಥಿಗಳು ವಿದೇಶಗಳಲ್ಲಿಯೂ, ಬಹುರಾಷ್ಟ್ರೀಯ ಕಂಪೆನಿಗಳಲ್ಲಿಯೂ ತಮ್ಮ ನೆಲೆಯನ್ನು ಕಂಡುಕೊಂಡಿರುತ್ತಾರೆ. ಪ್ರತಿ ವರ್ಷ ಸಂಸ್ಥೆಯ ಶೇಕಡಾ 100ರಷ್ಟು ವಿದ್ಯಾರ್ಥಿಗಳು ಕ್ಯಾಂಪಸ್ ಸೆಲೆಕ್ಷನ್ ಆಗುತ್ತಿದ್ದಾರೆ. ಪ್ರಸ್ತುತ 2020-21ನೇ ಸಾಲಿನ ಪ್ರವೇಶ ಪ್ರಕ್ರಿಯೆಯು ಆರಂಭಗೊಡಿದ್ದು, ಸ್ಥಾಪಕರ ಆಶಯ, ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದ ಶ್ರಮಕ್ಕೆ ಪೂರಕವಾಗಿ ತಮ್ಮ ಮಕ್ಕಳನ್ನು ಈ ಸಂಸ್ಥೆಗೆ ಸೇರಿಸಿ ಅವರ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡಬೇಕೆಂದು ಕೋರಲಾಗಿದೆ. ಆಸಕ್ತರು ಈ ಕೆಳಗಿನ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು.
08257-235141, 235289, Mob: 9448888930;

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.