Breaking News

ಪರವೂರುಗಳ ಕೋವಿಡ್ ಆಸ್ಪತ್ರೆಗಳಲ್ಲಿ ಸುಳ್ಯದ ಇನ್ನಷ್ಟು ಕೊರೋನಾ ವಾರಿಯರ್ಸ್

Advt_Headding_Middle
Advt_Headding_Middle

 

ಹೊರ ಊರುಗಳ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಸುಳ್ಯ ತಾಲೂಕಿನ ಇನ್ನಷ್ಟು ಮಂದಿ ಕೊರೋನಾ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸವಿತಾ

Advertisementಗುತ್ತಿಗಾರಿನ ನಿವಾಸಿಯಾದ ನಾರಾಯಣ ಮತ್ತು ಚಂದ್ರಾವತಿ ದಂಪತಿಯ ಪುತ್ರಿ, ಶರತ್ ಗುತ್ತಿಗಾರು ಅವರ ಸಹೋದರಿ ಸವಿತಾರವರು ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೊರೋನಾ ವಾರಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಮಡಿಕೇರಿಯ ಕಡ್ಯದ ಲಾಲುಕುಮಾರ್‌ರವ ಪತ್ನಿ. ಇವರು ನಿವೃತ್ತ ಯೋಧ.

ಜೆಎಸ್‌ಎಸ್ ವೈದ್ಯಕೀಯ ಆಸ್ಪತ್ರೆಯಲ್ಲಿಯೇ ನರ್ಸಿಂಗ್ ಓದಿದ ಸವಿತಾ ಅವರು ಬಳಿಕ ಅಲ್ಲಿಯೇ ಸೇವೆ ಆರಂಭಿಸಿದ್ದು, ೨೦ ವರ್ಷಗಳಿಂದ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮಧ್ಯೆ ಕಾರ್ಡಿಯಾಕ್ ಸೈನ್ಸ್‌ನ ಕೋರ್ಸ್ ಕೂಡಾ ಪಡೆದಿದ್ದಾರೆ. ಹೃದಯ ವಿಭಾಗದ ಐಸಿಯುನಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾದ ಬಳಿಕ ಈ ವಿಭಾಗದ ಐಸಿಯುನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸವಿತಾ ಅವರಿಗೆ ಇಬ್ಬರು ಮಕ್ಕಳು. ಪುತ್ರಿ ರಿಸ್ತಾ 8ನೇ ತರಗತಿಯಲ್ಲಿ, ಪುತ್ರ ಧ್ಯಾನ್ 5ನೇ ತರಗತಿಯಲ್ಲಿ ಓದುತ್ತಿದ್ದಾರೆ.

ಸುಮಾ :


ಕಂದ್ರಪ್ಪಾಡಿಯ ಪ್ರಸಿದ್ಧ ದೈವ ನರ್ತಕ ವಾಸು ಪರವ ಅವರ ಸೊಸೆ ( ಸಹೋದರಿ ಪುತ್ರ) ಸುಮಾ ಅವರು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಣಿಪಾಲ ಕೆ.ಎಂ.ಸಿ. ಯಲ್ಲಿ ನರ್ಸಿಂಗ್ ಶಿಕ್ಷಣ ಪಡೆದ ಅವರು ಕಳೆದ 4 ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೋವಿಡ್ ವಿಭಾಗವಾದ ಬಳಿಕ ಈ ವಿಭಾಗದ ಐಸಿಯುನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಬಿಎಸ್ಸಿ ಪದವಿಯನ್ನೂ ಪಡೆದಿದ್ದಾರೆ.

ಆಶಿತಾ:


ನೆಲ್ಲೂರು ಕೆಮ್ರಾಜೆ ಗ್ರಾಮದ ದೇವ-ಗುಡ್ಡನಮನೆ ರಾಮಣ್ಣ ಗೌಡ ಮತ್ತು ಶ್ರೀಮತಿ ಇಂದಿರಾರವರ ಪುತ್ರಿ ಆಶೀತಾ ಡಿ.ಆರ್.ರವರು ಮಂಗಳೂರಿನ ಅತ್ತಾವರದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಕೊರೋನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.


ಮಂಗಳೂರಿನ ಲಕ್ಷ್ಮೀ ಮೆಮೋರಿಯಲ್ ಕಾಲೇಜಿನಲ್ಲಿ ವೃತ್ತಿಪರ ವ್ಯಾಸಂಗ ಮುಗಿಸಿ ಬಳಿಕ ಕಣಚ್ಚೂರು ಆಸ್ಪತ್ರೆಯಲ್ಲಿ 9 ತಿಂಗಳು ಸೇವೆ ಸಲ್ಲಿಸಿ, ಇದೀಗ ಕಳೆದ 2 ವರ್ಷಗಳಿಂದ ಕೆಎಂ.ಸಿ.ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ 15 ದಿನಗಳಿಂದ ಕೊರೋನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ದೂರ ಶಿಕ್ಷಣ ದಲ್ಲಿ 2ನೇ ವರ್ಷದ ಬಿ.ಎಸ್.ಸಿ. ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇವರ ತಾಯಿ ಇಂದಿರಾರವರು ನೆಲ್ಲೂರು ಕೆಮ್ರಾಜೆಯಲ್ಲಿ ಆಶಾ ಕಾರ್ಯಕರ್ತೆಯಾಗಿದ್ದು ಕೊರೋನಾ ವಾರಿಯರ್ ಆಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.