ತುಳುನಾಡಿನ ಆಟಿ ತಿಂಗಳು

Advt_Headding_Middle
Advt_Headding_Middle

 

✍️ ಸೌಮ್ಯ ಸಿ.ಡಿ. ಎಲಿಮಲೆ

ತುಳುನಾಡಿನ ಸಾಂಪ್ರದಾಯಿಕ ಆಚರಣೆ ಆಟಿ
ಆಷಾಢದಲ್ಲಿ ತುಳುನಾಡಿಗೆ ಬರುವನು ಆಟಿ ಕಳಂಜ

ಹಿರಿಯರು ಕಷ್ಟದ ತಿಂಗಳು ಎಂದು ಕರೆಯಲ್ಪಡುವ ತಿಂಗಳು ಆಟಿ ತಿಂಗಳು
ಶುಭ ಸಮಾರಂಭಗಳನ್ನು ಮಾಡಬಾರದು ಎಂದು ಹೇಳುವ ತಿಂಗಳು ಆಟಿ ತಿಂಗಳು

ಹಿಂದಿನ ಕಾಲದಲ್ಲಿ ಅತೀ ಹೆಚ್ಚು ಬಿಸಿಲು ಇದ್ದ ಸಮಯ ಆಟಿ ತಿಂಗಳು
ಒಳಾಂಗಣ ಕ್ರೀಡೆ ಎಂದೇ ಕರೆಯಲ್ಪಡುವ ಚೆನ್ನೆಮಣೆ ಆಡುವ ಕಾಲ ಆಟಿ ತಿಂಗಳು

ತುಳುನಾಡಿನ ಜನರಿಗೆ ವಿಶೇಷವಾದ ದಿನ ಆಟಿ ಅಮಾವಾಸ್ಯೆ
ಹಾಲೆ ಮರದ ತೊಗಟೆಯ ಕಷಾಯ ಕುಡಿಯುವ ದಿನ ಆಟಿ ಅಮಾವಾಸ್ಯೆ

ಸಾರ್ವತ್ರಿಕ ಹಬ್ಬ ನಾಗರ ಪಂಚಮಿ ಆಚರಣೆಯ ತಿಂಗಳು ಆಟಿ ತಿಂಗಳು
ಮದುವೆಯಾದ ಹೆಣ್ಣನ್ನು ತವರಿಗೆ ಕರೆದುಕೊಂಡು ಬರುವ ತಿಂಗಳು ಆಟಿ ತಿಂಗಳು

ಕೆಸುವಿನ ಎಲೆಯ ಪತ್ರೊಡೆ ಆಟಿ ತಿಂಗಳ ವಿಶೇಷ ಖಾದ್ಯ
ಕಣಿಲೆಯ ವೈವಿಧ್ಯತೆಯ ಖಾದ್ಯಗಳು ಮಾಡುವ ತಿಂಗಳು ಆಟಿ ತಿಂಗಳು

ಭೂಮಿ ಗುಳಿಗನಿಗೆ ಉಣ ಬಡಿಸುವ ತಿಂಗಳು ಆಟಿ ತಿಂಗಳು
ಆಟಿ ಕಳಂಜ ಓಡಿಸುತ್ತಿತ್ತು ಆಟಿ ಮಾರಿಯನ್ನು

ಹಿಂದಿನ ಕಾಲದಲ್ಲಿ ಇಂತಹ ಸಂಪ್ರದಾಯಗಳಿಗೆ ಹೆಚ್ಚಿನ ಆದ್ಯತೆ ಇತ್ತು
ಇತ್ತೀಚೆಗೆ ಇಂತಹ ಸಂಪ್ರದಾಯಗಳು ಕಾಣಸಿಗುವುದು ತುಂಬಾ ವಿರಳ

ಸೌಮ್ಯ.ಸಿ.ಡಿ. ಎಲಿಮಲೆ. ಕೆ.ಎಸ್.ಎಸ್.ಕಾಲೇಜು ಸುಬ್ರಹ್ಮಣ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.