ನ.ಪಂ. ಸಭೆ : ಕೊರೋನಾ ಪ್ರಕರಣಗಳ ಮಾಹಿತಿ ನೀಡಲು ಒತ್ತಾಯ

Advt_Headding_Middle
Advt_Headding_Middle

ನಗರದಲ್ಲಿ ಕೋವಿಡ್ ತಡೆಗೆ ವಾರ್ಡ್ ಸಮಿತಿ ರಚನೆ  

ಪಾಸಿಟಿವ್ – ನೆಗೆಟಿವ್ ಮಾಹಿತಿ ನೀಡಲು ಆರೋಗ್ಯ ಇಲಾಖೆಗೆ ವಿನಂತಿ

ನಗರ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗದಂತೆ ಜಾಗೃತಿ ಮೂಡಿಸಲು ಮತ್ತು ಮುಂಜಾಗ್ರತಾ ಕ್ರಮ ವಹಿಸಲು ನಗರ ಮಟ್ಟದಲ್ಲಿ ವಾರ್ಡ್ ಸಮಿತಿ ರಚಿಸಲಾಗಿದೆ.

ಇಂದು ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಾರ್ಡ್ ಸಮಿತಿ ಯನ್ನು ಘೋಷಣೆ ಮಾಡಲಾಗಿದ್ದು ಆಯಾ ವಾರ್ಡ್ ಸದಸ್ಯರ ನೇತೃತ್ವದಲ್ಲಿ ಸಮಿತಿ ಯನ್ನು ರಚಿಸಲಾಗಿದೆ.

ನ.ಪಂ.‌ಸದದ್ಯರುಗಳಾದ ಎಂ.ವೆಂಕಪ್ಪ ಗೌಡ, ವಿನಯ್ ಕುಮಾರ್ ಕಂದಡ್ಕ ವಾರ್ಡ್ ವ್ಯಾಪ್ತಿಯಲ್ಲಿ ಮಾಡುವ ಕೆಲಸದ ಕುರಿತು ಮಾತನಾಡಿದರು.

ಸದಸ್ಯ ವಿನಯ ಕುಮಾರ್ ವಾರ್ಡ್ ವ್ಯಾಪ್ತಿಯ ಪಟ್ಟಿ ವಾಚಿಸಿದರು. ಸಮಿತಿಯಲ್ಲಿ ವಾರ್ಡ್ ಸದಸ್ಯರು, ಸಂಘ ಸಂಸ್ಥೆ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆ, ಆರೋಗ್ಯ ಇಲಾಖೆ ಯವರನ್ನು ಸೇರಿಸಿಕೊಳ್ಳಲಾಗಿದೆ. ಬಳಿಕ ಮಾತನಾಡಿದ ಸದಸ್ಯ ಎಂ.ವೆಂಕಪ್ಪ ಗೌಡರು ಕೊರೊನಾ ವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಿತಿ ಮಾಡಲಾಗಿದ್ದು ಅವರವರ ವಾರ್ಡ್ ನಲ್ಲಿ ಸಮರ್ಪಕ ಕೆಲಸಗಳು ನಡೆಯಬೇಕು.‌ಸರಕಾರದ ನಿಯಮವನ್ನು ಪಾಲಿಸಿಕೊಳ್ಳಬೇಕು. ಕೋವಿಡ್ ತಡೆಗಟ್ಟುವ ವಿಚಾರದಲ್ಲಿ ಯಾವುದೇ ರಾಜಿ ಬೇಡ ಎಂದು ಹೇಳಿದ ಅವರು ಇದರಲ್ಲಿ ಅರೋಗ್ಯ ಇಲಾಖೆಯ ಪಾತ್ರ ಮಹತ್ವದ್ದು ಎಂದು ಹೇಳಿದರು.

ನಾನು ತಾಲೂಕು ವೈದ್ಯಾಧಿಕಾರಿ ಗಳಿಗೆ ನಿನ್ನೆ ಕರೆ ಮಾಡಿದೆ. ಆದರೆ ಅವರು ಸ್ವೀಕರಿಸಲಿಲ್ಲ. ಅವರೂ ಕೂಡ ಮತ್ತೆ ಕರೆ ಮಾಡಲಿಲ್ಲ. ನಗರದಲ್ಲಿ ಕೋವಿಡ್ ಪ್ರಕರಣ ಬರುವುದು ಬೇಡ. ಒಂದು ವೇಳೆ ಇದ್ದರ ಅದರ ಮಾಹಿತಿ ಆರೋಗ್ಯ ಇಲಾಖೆ ನೀಡಬೇಕು. ಪ್ರತಿದಿನ ಪಾಸಿಟಿವ್ – ನೆಗೆಟಿವ್ ವರದಿ ನೀಡಬೇಕು.‌ ಇದನ್ನು ತಾಲೂಕು ಆರೋಗ್ಯಾಧಿಕಾರಿ ಮಾಡಬೇಕಾಗಿದೆ. ಅವರು ಕೆಲಸದ ಒತ್ತಡದಲ್ಲಿ ಇರಬಹುದು. ಅದು ನಮಗೂ ಅರ್ಥವಾಗುತ್ತದೆ. ಮಾಹಿತಿ ನೀಡಲು ಅವರು ಸಹಾಯಕರನ್ನು ನೇಮಕ ಮಾಡಲಿ ಎಂದು ಹೇಳಿದರಲ್ಲದೆ, ಸಭೆಯಲ್ಲಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿಗಳಲ್ಲಿ ಇಲ್ಲಿ ಚರ್ಚೆಯಾಗಿರುವ ವಿಚಾರವನ್ನು ತಾಲೂಕು ವೈದ್ಯ ಗಳಿಗೆ ತಿಳಿಸುವಂತೆ ಹೇಳಿದರು. ಮಾಧ್ಯಮ ಗಳಿಗೂ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ವೆಂಕಪ್ಪ ಗೌಡರು ಹೇಳಿದರು.

ಬಳಿಕ ಮಾತನಾಡಿದ ನ.ಪಂ
ಇಂಜಿನಿಯರ್ ಶಿವಕುಮಾರ್ ರವರು ನಗರ ವ್ಯಾಪ್ತಿಯ ಸಮಿತಿಯನ್ನು ರಚಿಸಲಾಗಿದ್ದು ಪ್ರತೀ ವಾರ್ಡ್ ನಲ್ಲಿ ವಾರದೊಳಗೆ ಸಭೆ ನಡೆಸಲು ಕ್ರಮಕೈಗೊಳ್ಳುತ್ತೇವೆ.‌ ಪ್ರತೀ 5 ವಾರ್ಡ್ ಗೆ ಒಬ್ಬರು ವೈದ್ಯರ ನೇಮಕಕ್ಕೂ ಕ್ರಮ ಕೈಗೊಳ್ಳುತ್ತೇವೆ. ಕ್ವಾರೆಂಟೇನ್ – ಹೋಂ ಕ್ವಾರೆಂಟೇನ್ ಕುರಿತು ಎಚ್ಚರಿಕೆ ಇಡುತ್ತೇವೆ. ಮನೆಯಲ್ಲೇ ಐಸೋಲೇಶನ್ ಆದವರ ಬಗ್ಗೆ ಅವರ ಜತೆಯೂ ವೈದ್ಯರಿಂದ ಸಮಾಲೋಚನೆ ನಡೆಸುತ್ತೇವೆ ಎಂದು ಹೇಳಿದರು.

ನ.ಪಂ
ಸದಸ್ಯರು, ಆರೋಗ್ಯ ಇಲಾಖೆ, ಕಂದಾಯ, ಅಂಗನವಾಡಿ ಕಾರ್ಯಕರ್ತೆ ಯರು, ಶಿಕ್ಷಕರು ಸಭೆಯಲ್ಲಿದ್ದರು.

ಲಾಕ್ ಡೌನ್ ಆರಂಭವಾದ ದಿನದಿಂದ ಸುಮಾರು 4 ತಿಂಗಳುಗಳ ಕಾಲ ಲಾಡ್ಜ್ ಗಳು ಬಂದ್ ಆಗಿದ್ದು ಯಾವುದೇ ರೀತಿಯ ಆದಾಯವಿಲ್ಲದೆ ಕಾಲ ಕಳೆಯುವಂತಾಗಿದೆ. ಆದರೆ ವಿಪರ್ಯಾಸವೆಂದರೆ ನಗರ ಪಂಚಾಯತ್ ನೀರಿನ ಬಿಲ್ಲು, ಮೆಸ್ಕಾಂ ವಿದ್ಯುತ್ ಬಿಲ್ಲು, ಪಂಚಾಯತ್ ಕಟ್ಟಡ ತೆರಿಗೆ ಪಾವತಿ ಬಿಲ್ಲು, ಲೈಸನ್ಸ್ ನವೀಕರಣ ಮಾಡುವ ಸಂದರ್ಭದಲ್ಲಿ ಕಸದ ತೆರಿಗೆ ಈ ಎಲ್ಲಾ ತೆರಿಗೆ ಬಿಲ್ಲುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವಂತೆ ಇಲಾಖೆಯು ಸೂಚನೆ ನೀಡಿರುತ್ತಾರೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಇದೆಲ್ಲವನ್ನೂ ಪಾವತಿ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಕಳೆದ 4 ತಿಂಗಳಿನಿಂದ ಆದಾಯವಿಲ್ಲದೆ ಕಂಗಲಾಗಿರುವ ಈ ಸನ್ನಿವೇಶದಲ್ಲಿ ಇಷ್ಟೆಲ್ಲಾ ತೆರಿಗೆಯನ್ನು ಒಮ್ಮೆಲೆ ಪಾವತಿಸಲು ಸಾಧ್ಯವಿಲ್ಲದಿರುವುದರಿಂದ ಸ್ವಲ್ಪ ಮಟ್ಟಿನ ಸಡಿಲಿಕೆ ಹಾಗೂ ಸಮಯಾವಕಾಶವನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರಾದ ಎಸ್. ಅಂಗಾರರವರು ಮುತುವರ್ಜಿ ವಹಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಯವರ ಮೂಲಕ ಮುಖ್ಯಮಂತ್ರಿ ಯವರ ಗಮನಕ್ಕೆ ತರುವಂತೆ ಲಾಡ್ಜ್ ಮಾಲಕರ ಪರವಾಗಿ ಸ್ವಾತಿ ಲಾಡ್ಜ್ ಮಾಲಕ ಶ್ರೀಕೃಷ್ಣ ಸೋಮಯಾಗಿವರು ಪತ್ರಿಕೆಗೆ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.