ಅಕ್ರಮ ಸಕ್ರಮ ಸಮಿತಿ : ವಳಲಂಬೆ ಬದಲು ಕೆಡೆಂಜಿ

Advt_Headding_Middle
Advt_Headding_Middle

ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿಗೆ ಸದಸ್ಯರನ್ನು ನೇಮಿಸಿ ಅಧಿಸೂಚನೆ ಪ್ರಕಟಗೊಂಡ ಎರಡೇ ದಿನದಲ್ಲಿ ಈ ಪೈಕಿ ಓರ್ವರ ನೇಮಕವನ್ನು ರದ್ದುಗೊಳಿಸಿ ಹೊಸಬರನ್ನು ನೇಮಕ ಮಾಡಲಾಗಿದೆ.

Advertisementಈಗಾಗಲೇ ವೆಂಕಟ್ ವಳಲಂಬೆ, ಗುಣವತಿ ಕೊಲ್ಲಂತಡ್ಕ ಹಾಗೂ ಬಾಳಪ್ಪ ಕಳಂಜ ಇವರನ್ನು ನೇಮಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ಮತ್ತೊಂದು ಅಧಿಸೂಚನೆ ಹೊರಬಿದ್ದಿದ್ದು, ವೆಂಕಟ್ ವಳಲಂಬೆಯವರ ನೇಮಕವನ್ನು ರದ್ದುಪಡಿಸಿ ಇವರ ಬದಲಿಗೆ ಬಿಜೆಪಿ ಸುಳ್ಯ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿಯವರನ್ನು ನೇಮಿಸಿ ಅಧಿಸೂಚನೆ ಹೊರಡಿಸಲಾಗಿದೆ.

Advertisement
“ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ತಾಲೂಕಿಗೆ ಹಾಗೂ ಕಡಬ ತಾಲೂಕಿಗೆ ಪ್ರತ್ಯೇಕ ಅಕ್ರಮ ಸಕ್ರಮ ಸಮಿತಿ ಆಗಬಹುದೆಂದು ಈ ಹಿಂದೆ ಯೋಚಿಸಿ ಹೆಸರು ಸೂಚಿಸಲಾಗಿತ್ತು. ಕ್ಷೇತ್ರಕ್ಕೆ ಒಂದೇ ಸಮಿತಿ ಮಾಡಬೇಕಾಗಿ ಬಂದುದರಿಂದ ಕಡಬ ತಾಲೂಕಿನವರು ಒಬ್ಬರು ಬೇಕೆನ್ನುವ ದೃಷ್ಟಿಯಿಂದ ವೆಂಕಟ್ ವಳಲಂಬೆಯವರು ಶಾಸಕರಲ್ಲಿ, ರಾಕೇಶ್ ರೈ ಕೆಡೆಂಜಿಯವರಿಗೆ ಅವಕಾಶ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. ಅದರಂತೆ ಬದಲಾವಣೆ ಮಾಡಲಾಗಿದೆ.” ಎಂದು ಬಿಜೆಪಿ ವತಿಯಿಂದ ಸ್ಪಷ್ಟನೆ ನೀಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.