Breaking News

ಕಲ್ಮಕಾರು: ಕೊರೋನಾ ಪಾಸಿಟಿವ್ ಸಂಪರ್ಕಿತರ ಕ್ವಾರಂಟೇನ್

Advt_Headding_Middle
Advt_Headding_Middle

ಅರಂತೋಡಿನ ವ್ಯಕ್ತಿಯೋರ್ವರಿಗೆ ಕೊರೋನಾ ಪಾಸಿಟಿವ್ ಬಂದು ಕಲ್ಮಕಾರಿನ ಕುಟುಂಬವೊಂದು ಕ್ವಾರಂಟೇನ್ ಗೆ ಒಳಪಟ್ಟ ಘಟನೆ ನಡೆದಿದೆ.

ಅರಂತೋಡಿನ ವ್ಯಕ್ತಿಯೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಅವರನ್ನು ಅವರ ಸಂಬಂಧಿ ಕಲ್ಮಕಾರಿನ ವ್ಯಕ್ತಿಯೋರ್ವರು ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ಹಿನ್ನೆಲೆಯಲ್ಲಿ ಕಲ್ಮಕಾರಿನ ಆ ಮನೆಯವರನ್ನು ಸ್ಥಳೀಯಾಡಳಿತದವರು ಇಂದು ಕ್ವಾರಂಟೇನ್ ಗೆ ಒಳಪಡಿಸಿದ್ದಾರೆ.

ಕೊರೋನಾ ಪಾಸಿಟಿವ್ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತ ವ್ಯಕ್ತಿ ಕಲ್ಮಕಾರಿನವರಾಗಿದ್ದು ಊರಿಗೆ ಬಂದು ಕ್ವಾರಂಟೇನ್ ಗೆ ಒಳಪಡದೇ ಇರುವುದನ್ನು ಮನಗಂಡ ಊರಿನವರು ಸ್ಥಳೀಯಾಡಳಿತಕ್ಕೆ ಮಾಹಿತಿ ನೀಡಿದ್ದರು. ಆ ಬಳಿಕ ಸ್ಥಳೀಯಾಡಳಿತದವರು ತಾಲೂಕು ಆಡಳಿತವನ್ನು ಸಂಪರ್ಕಿಸಿದ್ದು ಕ್ವಾರಂಟೇನ್ ಒಳಪಡಬೇಕಾದವರ ಲಿಸ್ಟ್ ನಲ್ಲಿ ಕಲ್ಮಕಾರಿನ ವ್ಯಕ್ತಿಯ ಹೆಸರು ಇತ್ತೆಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.