ಏನೆಕಲ್ಲಿನಲ್ಲಿ ಮೀನು ಹಿಡಿಯಲು ಬಂದವರ ಮೇಲೆ ಕೇಸು ದಾಖಲು

Advt_Headding_Middle
Advt_Headding_Middle

 

ಏನೆಕಲ್ಲು ಸಮೀಪ ದೇವರ ಮೀನುಗಳನ್ನು ಹಿಡಿಯಲು ಬಂದವರನ್ನು ಊರವರು ಹಿಡಿದು ಪೊಲೀಸರಿಗೊಪ್ಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

” ಇಂದು ಬೆಳಗಿನ ಜಾವ 2-30 ಗಂಟೆಗೆ ಕಡಬ ತಾಲ್ಲೂಕು ಏನೆಕಲ್ಲು ಗ್ರಾಮದ ಏನೆಕಲ್ಲು ಚೋಳುಗುಳು ಮಾಟ ಎಂಬಲ್ಲಿ ಪ್ರಸ್ತುತ ಜಿಲ್ಲೆಯಲ್ಲಿ ಜಾರಿಯಿರುವ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ಪುತ್ತೂರು ತಾಲ್ಲೂಕು ಸವಣೂರು ಗ್ರಾಮದ ನಿವಾಸಿಗಳಾದ ಬಶೀರ್ ನರಿಮೊಗರು, ಅಬ್ದುಲ್ ರಜಾಕ್ ,ಬಶೀರ್ ಸವಣೂರು, ಅಬ್ದುಲ್ ಸಮ್ಮದ್ ಎಂಬವರುಗಳು ಗುಂಪಾಗಿ ಸೇರಿ ಸಾರ್ವಜನಿಕ ಹೊಳೆಯಲ್ಲಿ ಮೀನು ಹಿಡಿಯುವಲ್ಲಿ ನಿರತರಾಗಿರುವುದಾಗಿದೆ. ಈ ಬಗ್ಗೆ ಕಡಬ ಏನೆಕಲ್ ನಿವಾಸಿ ಉದಯ್ ಕುಮಾರ್ ಎಂಬವರು ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕಲಂ: 269, 270, ಐಪಿಸಿ ಮತ್ತು ಕಲಂ:5(1) ಕರ್ನಾಟಕ ಸಾಂಕ್ರಾಮಿಕ ರೋಗಗಳ ಅದ್ಯಾಧೇಶ 2020 ಯಂತೆ ಪ್ರಕರಣ ದಾಖಲಾಗಿದೆ” ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.