ಛಲದಿಂದ ಪರೀಕ್ಷೆ ಬರೆದು ಅಧಿಕ ಅಂಕ ಪಡೆದ ರಚನ್ ಕುಮಾರ್

Advt_Headding_Middle
Advt_Headding_Middle

ಅಸೌಖ್ಯದಿಂದಾಗಿ ಪಿಯುಸಿಯಲ್ಲಿ ರೆಗ್ಯುಲರ್ ತರಗತಿಗಳಿಗೆ ಅಸಾಧ್ಯವಾದರೂ, ಛಲದಿಂದ ಖಾಸಗಿಯಾಗಿ ಪರೀಕ್ಷೆ ಬರೆದು, ಪಾಡಾಜೆಯ ರಚನ್ ಕುಮಾರ್ ಅಧಿಕ ಅಂಕ ಪಡೆದಿದ್ದಾರೆ.

Advertisement

ಪಾಡಾಜೆಯ ಗೋಪಾಲಕೃಷ್ಣ ಸುಶೀಲಾ ದಂಪತಿಯ ಪುತ್ರನಾದ ರಚನ್‌ಕುಮಾರ್ ಸುಳ್ಯ ಜೂನಿಯರ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದಿದ್ದರು. ಆದರೆ, ತರಗತಿ ಆರಂಭಗೊಂಡು 2 ತಿಂಗಳಾಗುವಾಗ ಇವರಿಗೆ ಜಾಂಡೀಸ್ ಬಾಧಿಸಿತು.
ಖಾಯಿಲೆ ಉಲ್ಬಣಗೊಂಡದ್ದರಿಂದ ಸುದೀರ್ಘ ಕಾಲ ಮನೆಯಲ್ಲಿಯೇ ವಿಶ್ರಾಂತಿ ಅಗತ್ಯವೆಂದು ವೈದ್ಯರು ಸೂಚಿಸಿದರು. ಇದರಿಂದಾಗಿ ರಚನ್ ಅವರ ರೆಗ್ಯುಲರ್ ಕಲಿಕೆ ಮೊಟಕುಗೊಂಡಿತ್ತು. ಮತ್ತೆ ತರಗತಿಗೆ ಹಾಜರಾಗುವುದಿದ್ದರೆ ಒಂದು ವರ್ಷ ವ್ಯಯವಾಗುತ್ತದೆ. ಹೀಗಾಗಿ ಖಾಸಗಿಯಾಗಿ ಪರೀಕ್ಷೆ ಬರೆಯಲು ನಿರ್ಧರಿಸಿದರು. ಆದರೆ ವಿಜ್ಞಾನವನ್ನು ಖಾಸಗಿಯಾಗಿ ಬರೆಯಲು ಸಾಧ್ಯವಿಲ್ಲ. ಹೀಗಾಗಿ ಕಾಮರ್ಸ್ ಆಯ್ದುಕೊಂಡು ಸುಳ್ಯದ ಜ್ಞಾನದೀಪ ವಿದ್ಯಾಸಂಸ್ಥೆಯ ಮೂಲಕ ಪರೀಕ್ಷೆ ಬರೆದರು. ಈ ಬಾರಿ 553 ಅಂಕ ಪಡೆದಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ 530 ಅಂಕ ಪಡೆದಿದ್ದ ರಚನ್‌ಗೆ ಮುಂದೆ ಸಿ.ಎ. ಮಾಡುವ ಕನಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.