Breaking News

ಅರಂತೋಡು : ರಸ್ತೆ ದುರಸ್ತಿ

Advt_Headding_Middle
Advt_Headding_Middle


ಅರಂತೋಡು ಗ್ರಾಮದ ಅರಂತೋಡು – ಎಲಿಮಲೆ ರಸ್ತೆಯ ಅಡ್ತಲೆ ಸಮೀಪ ಹೊಸದಾಗಿ ಮೋರಿಗಳನ್ನು ಹಾಕಲಾಗಿದ್ದು ಅದರಲ್ಲಿ ಒಂದನ್ನು ರಸ್ತೆಯನ್ನು ಅಗೆದು ಅಳವಡಿಸಲಾಗಿದ್ದು, ಹಾಕಿದ್ದ ಮಣ್ಣು ಮಳೆನೀರಿಗೆ ಕೊಚ್ಚಿ ಹೋಗಿದೆ. ರಸ್ತೆಯಲ್ಲಿ ದೊಡ್ಡ ಗುಂಡಿ ನಿರ್ಮಾಣವಾಗಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿತ್ತು. ಇದನ್ನು ಗಮನಿಸಿದ ಸ್ಪಂದನ ಗೆಳೆಯರ ಬಳಗದ ಸದಸ್ಯರು ಸೇರಿಕೊಂಡು ಊರಿನವರ ಸಹಕಾರದೊಂದಿಗೆ ಹದಗೆಟ್ಟ ರಸ್ತೆಯನ್ನು ಸರಿಪಡಿಸುವುದಾಗಿ ನಿರ್ಧರಿಸಿ ಒಂದು ದಿನದ ಶ್ರಮದಾನ ಮಾಡಿ ಹದಗೆಟ್ಟ ರಸ್ತೆಯನ್ನು ಸರಿಪಡಿಸಲಾಯಿತು.

ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷರಾದ ವಿನಯ್ ಬೆದ್ರುಪಣೆ, ಉಪಾಧ್ಯಕ್ಷ ಲೋಹಿತ್ ಮೇಲಡ್ತಲೆ, ಕಾರ್ಯದರ್ಶಿ ಸಂತೋಷ್ ಪಿಂಡಿಮನೆ, ಜತೆ ಕಾರ್ಯದರ್ಶಿ ಕಿಶೋರ್ ಅಡ್ಕ, ಖಜಾಂಜಿ
ಸುನಿಲ್ ಅಡ್ತಲೆ, ಗೌರವ ಸಲಹೆಗಾರರಾದ ಭವಾನಿಶಂಕರ ಅಡ್ತಲೆ, ಕೇಶವ ಅಡ್ತಲೆ, ಸದಾನಂದ ಅಡ್ತಲೆ, ಶಿವರಾಮ ಕಲ್ಲುಗದ್ದೆ, ಸದಸ್ಯರುಗಳಾದ ಪ್ರವೀಣ್ ಪಾನತ್ತಿಲ, ಗಿರೀಶ್ ಅಡ್ಕ, ಚೇತನ್ ಮೇಲಡ್ತಲೆ, ದುರ್ಗಾಪ್ರಸಾದ್ ಮೇಲಡ್ತಲೆ, ದಯಾನಂದ ಬೆದ್ರುಪಣೆ, ಸುನಿಲ್ ಪಿಂಡಿಮನೆ, ಜಗದೀಶ್ ಕಾಯರ, ಶರತ್ ಬೆದ್ರುಪಣೆ, ಸ್ವಾತಿಕ್ ಕಿರ್ಲಾಯ, ಕೇಶವ ಮೇಲಡ್ತಲೆ, ಜೀವನ್ ಪಿಂಡಿಮನೆ, ಜಗದೀಶ್ ಬಿ.ಕೆ., ಯಶವಂತ ಚೀಮಾಡು, ರಂಜಿತ್ ಅಡ್ತಲೆ, ಅಶೋಕ ಬಿ., ಊರವರಾದ ತೀರ್ಥಪ್ರಸಾದ್ ಅಡ್ತಲೆ, ವಿಶ್ವನಾಥ ಅಡ್ತಲೆ, ಮೋನಿ ಅಡ್ತಲೆ, ರೋಷನ್ ಮೇಲಡ್ತಲೆ, ಶ್ರೇಯಸ್ ಹಾಗೂ ಮತ್ತಿತರರು ಶ್ರಮದಾನ ಕಾರ್ಯದಲ್ಲಿ ಕೈ ಜೋಡಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.