Breaking News

ಜಾಲ್ಸೂರು-ಅಕ್ಕಿಮಲೆ ಗಬಲಡ್ಕ ಪರಿಸರದಲ್ಲಿ ಕಂಡು ಬಂದ ಒಂಟಿ ಚಿರತೆ

Advt_Headding_Middle
Advt_Headding_Middle

 

ಪರಿಸರದ ಐದು ಸಾಕು ನಾಯಿಗಳು ಕಣ್ಮರೆ

ಆತಂಕದಲ್ಲಿ ಜನತೆ, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳ ಭೇಟಿ-ಪರಿಶೀಲನೆ

ಜಾಲ್ಸೂರು ಗ್ರಾಮದ ನಿಡುಬೆ, ಗಬಲಡ್ಕ, ಕನಕಮಜಲಿನ ಅಕ್ಕಿಮಲೆ ಪ್ರದೇಶದಲ್ಲಿ ಒಂಟಿ ಚಿರತೆಯೊಂದು ಕಂಡು ಬಂದಿದ್ದು, ಪರಿಸರದ ಸುಮಾರು ಐದು ಸಾಕು ನಾಯಿಗಳು ಕಣ್ಮರೆಯಾಗಿದ್ದು, ಜನತೆ ಆತಂಕಗೊಂಡಿರುವ ಘಟನೆ ವರದಿಯಾಗಿದೆ.
ಜಾಲ್ಸೂರು ಗ್ರಾಮದ ಪಟೇಲ್ ಮನೆ ಉಮನಾಥ ಗೌಡ, ಜಾಕೆ ಸದಾನಂದ, ಚಿನ್ನಪ್ಪ ನಿಡುಬೆ, ಸುಂದರ ಅವರ ಸಾಕು ನಾಯಿಗಳು ಕಳೆದೊಂದು ತಿಂಗಳಿನಿಂದ ಕಣ್ಮರೆಯಾಗಿದ್ದು, ಚಿರತೆ ಈ ಭಾಗದ ಕೆಲವರಿಗೆ ಕಂಡುಬಂದಿದೆ ಎನ್ನಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಮುಂದಿನ ದಿನಗಳಲ್ಲಿ ಚಿರತೆ ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.