Breaking News

ಆಲೆಟ್ಟಿ ಭಾಗದಲ್ಲಿ ನಿರಂತರ ಕಾಡಾನೆಗಳ ದಾಳಿ- ಕೃಷಿಕರಿಗೆ ಸಂಕಷ್ಟದ ಸ್ಥಿತಿ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಕೆಲವು ಕಡೆಗಳಲ್ಲಿ ಕಳೆದ ಹಲವು ದಿನಗಳಿಂದ ಕಾಡಾನೆಗಳ ಹಿಂಡು ಕೃಷಿಕರ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಕೃಷಿ ಬೆಳೆಯನ್ನು ನಾಶಪಡಿಸುತ್ತಿದೆ.

Advertisement ಜು.24 ರಂದು ರಾತ್ರಿ ಮತ್ತೆ ತುದಿಯಡ್ಕ ಕೃಪಾಶಂಕರ, ಬಿಸಿಲುಮಲೆ ನಾಗರಾಜ ಭಟ್, ಜನಾರ್ಧನ ಭಟ್, ರಾಮನಾರಾಯಣ ಬೆಳ್ಳಪಾರೆ, ಚಳ್ಳಂಗಾರು ಬಾಬು ಗೌಡ ಮುಂತಾದವರ ತೋಟಕ್ಕೆ ಆನೆಗಳ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದ ಕೃಷಿ ಬೆಳೆಯನ್ನು ನಾಶಪಡಿಸಿದೆ ಎಂದು ತಿಳಿದು ಬಂದಿದೆ. ನಿರಂತರ ಆಲೆಟ್ಟಿ ಗ್ರಾಮದ ಹಲವು ಕಡೆಗಳಲ್ಲಿ ತೋಟವನ್ನು ನಾಶಪಡಿಸುತ್ತಿರುವ ಘಟನೆ ದಿನೇ ದಿನೇ ವರದಿಯಾಗುತ್ತಲೆ ಇದೆ.ತಕ್ಷಣ ಅರಣ್ಯ ಇಲಾಖೆಯು ಎಚ್ಚೆತ್ತುಕೊಂಡು ಆನೆಗಳ ಕಡಿವಾಣಕ್ಕೆ ಶಾಶ್ವತ ಪರಿಹಾರದ ವ್ಯವಸ್ಥೆ ಮಾಡಬೇಕೆಂದು ಸಂಕಷ್ಟದಲ್ಲಿರುವ ಈ ಭಾಗದ ಕೃಷಿಕರು ಆಗ್ರಹಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.