ಕನಕಮಜಲು: ಕೋಡಿ ತಿರುವಿನಲ್ಲಿ ಜೀಪು-ಬೈಕ್ ಡಿಕ್ಕಿ, ಮಾತಿನ ಚಕಮಕಿ ಠಾಣೆಯಲ್ಲಿ ಇತ್ಯರ್ಥ

Advt_Headding_Middle
Advt_Headding_Middle

ಬೈಕೊಂದು ತಿರುವಿನಲ್ಲಿ ವಿರುದ್ದ ದಿಕ್ಕಿನಲ್ಲಿ ಸಂಚರಿಸಿ, ಜೀಪಿಗೆ ಢಿಕ್ಕಿ ಹೊಡೆದು ಪರಸ್ಪರ ಮಾತಿನ ಚಕಮಕಿ ನಡೆದ ಹಾಗೂ ಸುಳ್ಯ ಪೊಲೀಸರು ಸ್ಥಳಕ್ಕಾಗಮಿಸಿ, ಬಳಿಕ ಠಾಣೆಯಲ್ಲಿ ಇತ್ಯರ್ಥಗೊಂಡ ಘಟನೆ ಕನಕಮಜಲು ಗ್ರಾಮದ ಕೋಡಿ ಎಂಬಲ್ಲಿ ಜು.೨೪ರಂದು ರಾತ್ರಿ ಸಂಭವಿಸಿದೆ.
ಕನಕಮಜಲಿನ ಕೋಡಿ ತಿರುವಿನಲ್ಲಿ ರವಿಪ್ರಕಾಶ್ ಬುಡ್ಲೆಗುತ್ತು ಅವರು ತಮ್ಮ ಜೀಪ್ ಸ್ಟಾರ್ಟ್ ಮಾಡಿ ರಸ್ತೆಗೆ ಬರುತ್ತಿದ್ದಂತೆ ಸುಳ್ಯದಿಂದ ಕನಕಮಜಲು ಕಡೆಗೆ ಬರುತ್ತಿದ್ದ ಬೆಳ್ಳಾರೆಯ ವ್ಯಕ್ತಿಯೊರ್ವರು ಚಲಾಯಿಸುತ್ತಿದ್ದ ಬೈಕ್ ವಿರುದ್ದ ದಿಕ್ಕಿನಲ್ಲಿ ಬಂದು ಜೀಪ್ ಗೆ ಢಿಕ್ಕಿ ಹೊಡೆಯಿತು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಸ್ಥಳೀಯರು ಸೇರಿದರೆನ್ನಲಾಗಿದೆ.

Advertisement

ಈ ಸಂದರ್ಭದಲ್ಲಿ ಸುಳ್ಯದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ವ್ಯಕ್ತಿಯೋರ್ವರು ಬಂದು ಬೈಕ್ ಸವಾರನನ್ನು ವಿಚಾರಿಸಿ, ನಾನು ಕ್ರೈಮ್ ಎಸ್.ಐ. ಎಂದು ಹೇಳಿದರೆನ್ನಲಾಗಿದೆ.ಆದರೆ ಅವರು ಸಿವಿಲ್ ಡ್ರೆಸ್ ನಲ್ಲಿದ್ದುದರಿಂದ ಅಲ್ಲಿದ್ದವರಿಗೆ ಅವರು ಪೊಲೀಸ್ ಎಂದು ತಿಳಿಯಲಿಲ್ಲ. ಈ ವೇಳೆ ಅಲ್ಲಿ ಮಾತಿನ ಚಕಮಕಿ ನಡೆದು, ಸುಳ್ಯ ಪೊಲೀಸರು ಸ್ಥಳಕ್ಕೆ ಬಂದು ಬೈಕ್ ಸವಾರನನ್ನು ವಶಕ್ಕೆ ಪಡೆದು, ಠಾಣೆಗೆ ಕರೆದುಕೊಂಡು ಹೋಗಿದ್ದರೆನ್ನಲಾಗಿದೆ. ಬಳಿಕ ಬೈಕ್ ಸವಾರ ಬೈಕ್ ಚಲಾವಣೆಯ ಸಂದರ್ಭದಲ್ಲಿ ಮಧ್ಯ ಸೇವಿಸಿದ್ದರಿಂದ ಅವರಿಗೆ ಬುದ್ದಿಮಾತು ಹೇಳಿ ಠಾಣೆಯಲ್ಲಿ ಇತ್ಯರ್ಥಪಡಿಸಲಾಯಿತು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಬೈಕ್ ಜಖಂಗೊಂಡಿದೆ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.