Breaking News

ತಾರಕೇಶ್ವರಿ ಯು.ಎಸ್ ಅವರಿಗೆ ಡಾಕ್ಟರೇಟ್‌

Advt_Headding_Middle
Advt_Headding_Middle

ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯ ಇದರ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ತಾರಕೇಶ್ವರಿ ಯು.ಎಸ್ ಡಾಕ್ಟರೇಟ್‌ ಪದವಿ ಪಡೆದಿರುತ್ತಾರೆ.
” ಕರಾವಳಿ ಕರ್ನಾಟಕದಲ್ಲಿ ಹಿಂದುತ್ವ ರಾಜಕಾರಣ; ದಕ್ಷಿಣ ಕನ್ನಡದಲ್ಲಿ ಹಿಂದೂ ಸಂಘ ಸಂಸ್ಥೆಗಳ ವಿಸ್ತರಣೆ ಮತ್ತು ಹಿಂದುತ್ವ ಸಿದ್ದಾಂತ ಪ್ರಸರಣದ ಒಂದು ಅಧ್ಯಯನ ” ಎಂಬ ವಿಷಯದ ಬಗ್ಗೆ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ . ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ। ರಾಜರಾಮ್ ತೋಳ್ಪಾಡಿಯವರು ಮಾರ್ಗದರ್ಶನ ಮಾಡಿರುತ್ತಾರೆ. ಇವರು ಚಿಕ್ಕಮಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಧೀಶರ ತ್ವರಿತಗತಿ ವಿಶೇಷ ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರೂ, ಮಾಜಿ ಜಿಲ್ಲಾ ಗ್ರಾಹಕರ ನ್ಯಾಯಧೀಶರೂ ಆಗಿರುವ ಶ್ರೀಹರ್ಷ ಇವರ ಪತ್ನಿ. ಪುತ್ತೂರಿನ ನ್ಯಾಯವಾದಿ ದಿ. ಯು.ಪಿ ಶಿವರಾಮ ಅವರ ಮಗಳು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.