ಜು. 31 : ಸುಳ್ಯ ಎಚ್.ಡಿ.ಎಫ್.ಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ರವೀಂದ್ರನಾಥ್ ಭಟ್ ಪಾವಲ್ಕೊಡಿ ನಿವೃತ್ತಿ

Advt_Headding_Middle
Advt_Headding_Middle

ಸುಳ್ಯ ಬಾಳೆಮಕ್ಕಿಯ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ
ಎಚ್.ಡಿ.ಎಫ್.ಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ರವೀಂದ್ರನಾಥ್ ಭಟ್ ಪಾವಲ್ಕೊಡಿಯವರು ಜು. 31 ರಂದು
ನಿವೃತ್ತಿಗೊಳ್ಳಲಿದ್ದಾರೆ.

ಮೂಲತಃ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಪಾವಲ್ಕೊಡಿಯವರಾದ ರವೀಂದ್ರನಾಥ್ ಭಟ್ ಅವರು ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೈವಳಿಕೆಯಲ್ಲಿ ಪೂರೈಸಿ, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಪೂರೈಸಿ, ವಿವೇಕಾನಂದ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪಡೆದ ನಂತರ ಮಂಗಳೂರಿನ ಬೈಕಂಪಾಡಿಯಲ್ಲಿ ನಿಟ್ಟೆ ಗ್ರೂಪ್ ನವರ ಲೆಮಿನಾ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿದ್ದರು. ಬಳಿಕ ಸುಮಾರು ಐದು ವರ್ಷಗಳ ಕಾಲ ಮಸ್ಕತ್ ನಲ್ಲಿ ಉದ್ಯೋಗದಲ್ಲಿದ್ದರು. ಮಸ್ಕತ್ ನಿಂದ ಹಿಂತಿರುಗಿದ ನಂತರ ಮಂಗಳೂರು ಟಾಟಾ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು.
2003 ರಲ್ಲಿ ಸೆಂಚುರಿಯನ್ ಬ್ಯಾಂಕ್ ಆಫ್ ಪಂಜಾಬ್ ನ ಹುಬ್ಬಳ್ಳಿ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕರ್ತವ್ಯಕ್ಕೆ ಸೇರ್ಪಡೆಯಾದ ಇವರು , 2008 ರಲ್ಲಿ ಈ ಬ್ಯಾಂಕ್ ಎಚ್.ಡಿ.ಎಫ್.ಸಿ ಬ್ಯಾಂಕ್ ನೊಂದಿಗೆ ವಿಲೀನಗೊಂಡ ನಂತರ ಕಾಸರಗೋಡು, ಮಂಗಳೂರು ಕುಮಟಾ ಹಾಗೂ ಪುತ್ತೂರಿನಲ್ಲಿ ಕರ್ತವ್ಯ ಸಲ್ಲಿಸಿದ್ದರು. 2013ರಲ್ಲಿ ಸುಳ್ಯ ಶಾಖೆಗೆ ವರ್ಗಾವಣೆಗೊಂಡ ಇವರು, 2014 ರಿಂದ ಶಾಖಾ ವ್ಯವಸ್ಥಾಪಕರಾಗಿ ಭಡ್ತಿ ಹೊಂದಿ ಸುಳ್ಯ ಶಾಖೆಯಲ್ಲಿ ಸೇವೆ ಸಲ್ಲಿಸಿದ್ದರು.
ಸುಳ್ಯದಲ್ಲಿ ಕರ್ತವ್ಯ ಸಲ್ಲಿಸುವ ಸಂದರ್ಭದಲ್ಲಿ ತನ್ನ ಸೇವಾ ಕಾರ್ಯದಿಂದ ಜನಮನ್ನಣೆ ಗಳಿಸಿದ್ದರು. ಇತ್ತೀಚೆಗೆ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಆದಿತ್ಯ ಪುರಿಯವರು ಶಾಖೆಗೆ ಭೇಟಿ ಸುಳ್ಯ ಶಾಖೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇವರ ಪತ್ನಿ ಶ್ರೀಮತಿ ರಾಜೇಶ್ವರಿಯವರು ಗೃಹಿಣಿಯಾಗಿದ್ದಾರೆ.ಪುತ್ರಿ ಪ್ರತೀಕ್ಷಾ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಅಂತಿಮ ಬಿ.ಕಾಂ ವಿದ್ಯಾರ್ಥಿನಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.