ಮಂಗಳೂರು ತಲುಪಿದ ಕೆಸಿಎಫ್ ಒಮಾನ್ ಪ್ರಥಮ ಚಾರ್ಟಡ್ ಪ್ಲೈಟ್

Advt_Headding_Middle
Advt_Headding_Middle

 

ಒಮಾನ್:ಕೋವಿಡ್-19 ಕೊರೋನ ವೈರಸ್ ಹಿನ್ನಲೆ ವಿಮಾನಗಳು ರದ್ದಾಗಿ, ಹಲವಾರು ಕನ್ನಡಿಗರು ಊರಿಗೆ ತೆರಳಲು, ಕೆಲಸವಿಲ್ಲದೆ ಸಂಕಷ್ಟಪಡುತ್ತಿರುವುದನ್ನು ಕಂಡು ಕೆಸಿಎಫ್ ಒಮಾನ್ ಪ್ರಾಯೋಜಕತ್ವ ದಲ್ಲ ಇಂಡಿಗೋ ವಿಮಾನವು ಇಂದು ಮಧ್ಯಾಹ್ನ ಮಂಗಳುರಿಗೆ ತಲುಪಿತು.

ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಷನ್ ವತಿಯಿಂದ ಆಯೋಜಿಸಿದ ಪ್ರಪ್ರಥಮ ಚಾರ್ಟಡ್ ವಿಮಾನದವು ಪ್ರಯಾಣಿಕರು ಇದರ ಪ್ರಯೋಜನ ಪಡೆದಿದ್ದು, ಸಂಕಷ್ಟದಲ್ಲಿರುವ ನೂರಾರು ಕನ್ನಡಿಗರ ಪಾಲಿಗೆ ಬಹುದೊಡ್ಡ ಆಸರೆಯಾಗಿ ಮೂಡಿತು.

ಅನಾರೋಗ್ಯಕ್ಕೊಳಗಾದವರು, ಗರ್ಭಿಣಿಯರು, ಸಣ್ಣಮಕ್ಕಳು, ವೀಸಾ ಕಾಲಾವದಿ ಮುಗಿದವರು, ಉದ್ಯೋಗ ಕಳೆದು ಕೊಂಡವರು ಇತ್ಯಾದಿ, ವಿಭಿನ್ನ ರೀತಿಯ ಸಂತ್ರಸ್ತರನ್ನೊಳಗೊಂಡ ಪ್ರಯಾಣಿಕರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದರು.

ಯಾತ್ರೆಯ ನೊಂದಾವಣಿಯಿಂದ ಪ್ರಾರಂಭಿಸಿ, ಅಗತ್ಯ ದಾಖಲೆಗಳು ಮತ್ತು ಪಾಲಿಸ ಬೇಕಾದ ಆರೋಗ್ಯ ಸಂಬಂಧಿತ ಸಂಪೂರ್ಣ ಮಾಹಿತಿಯನ್ನು, ಕೆಸಿಎಫ್ ಪ್ರತೀ ಪ್ರಯಾಣಿಕರಿಗೆ ನೀಡಿದ್ದು, ಮಹಾಮಾರಿ ಕೋರೋಣ ಹರಡುವಿಕೆಯ ಮುನ್ನೆಚ್ಚರಿಕೆಯಾಗಿ ಪ್ರಯಾಣದ ಸಂದರ್ಭದಲ್ಲಿ ಧರಿಸಬೇಕಾದ ಸಂಪೂರ್ಣ ಸುರಕ್ಷಾ ಕವಚ (PPE kit) ಮತ್ತು ಲಘು ಉಪಹಾರವು ಸಂಘಟನೆಯ ವತಿಯಿಂದ ನೀಡಲಾಗಿತ್ತು.

ತನ್ನ ಪ್ರಯಾಣಿಕರ ಸುರಕ್ಷೆ ಮತ್ತು ಉತ್ತಮ ಸೇವೆಯ ಉದ್ದೇಶವನ್ನಿಟ್ಟು ಕೊಂಡು ಪ್ರತೀಯೋರ್ವರೊಂದಿಗೆ ಸಂಘಟನೆಯ ಕಾರ್ಯಕರ್ತರು ನಿರಂತರ ಸಂಪರ್ಕದಲ್ಲಿದ್ದು, ಕ್ವಾರಂಟೈನ್ ಮುಗಿಸಿ ಮನೆ ಸೇರುವ ವರೆಗೂ ಈ ಪ್ರಕ್ರಿಯೆ ಮುಂದುವರಿಯಲಿದೆ. ಇಂತಹ ಹಲವಾರು ಸಮಾಜ ಮುಖಿ ಚಟುವಟಿಕೆಗಳ ಮುಖಾಂತರ ಕೆಸಿಎಫ್, ಸಾರ್ವಜನಿಕ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಪ್ರಸ್ತುತ ಚಾರ್ಟರ್ಡ್ ವಿಮಾನದ ವ್ಯವಸ್ಥೆ ಮತ್ತು ಅರ್ಪಣಾ ಮನೋಭಾವ ಹೊಂದಿರುವ ಕಾರ್ಯಕರ್ತರ ಸೇವಾ ವೈಖರಿಯು ಪ್ರಯಾಣಿಕರ ಪ್ರಶಂಸೆಗೆ ಪಾತ್ರವಾಗಿದೆ.

ಕೆಸಿಎಫ್ ಆಯೋಜಿಸಿದ ಚಾರ್ಟರ್ಡ್ ವಿಮಾನದ ಯಶಸ್ವಿಯಲ್ಲಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್, ಕೇಂದ್ರ ಮತ್ತು ರಾಜ್ಯ ಸರಕಾರಗಳ ಮತ್ತು ಒಮಾನ್ ಭಾರತೀಯ ರಾಯಭಾರ ಕಚೇರಿಯ ಸಹಕಾರವನ್ನು ನೆನಪಿಸಿಕೊಳ್ಳುತ್ತಾ, ಅಗತ್ಯವಿರುವ ಸರ್ಕಾರೀ ಅನುಮತಿಯನ್ನು ಪಡೆಯುವಲ್ಲಿ ಸಹಕರಿಸಿದ, ಕರ್ನಾಟಕ ರಾಜ್ಯ ಸರ್ಕಾರ, ಮಂಗಳೂರು ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್, ಕರ್ನಾಟಕ ಮುಸ್ಲಿಂ ಜಮಾ ಅತ್ ಮತ್ತು ಕೆಸಿಎಫ್ ಅಂತರಾಷ್ಟ್ರೀಯ ನಾಯಕರಿಗೆ ಹಾಗೂ ಇಂಡಿಗೋ ವ್ಯವಸ್ಥಾಪಕ ರಿಗೂ , ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿದೆ.

ಈ ಅಭೂತಪೂರ್ವ ನಿಮಿಷಕ್ಕೆ KCF ಒಮಾನ್ ರಾಷ್ಟ್ರೀಯ ಸಮಿತಿ ಹಾಗೂ ಕೆಸಿಎಫ್ ಒಮಾನ್ ನಲ್ಲಿ ಸುಳ್ಯ ವನ್ನು ಪ್ರತಿನಿಧಿಸುವ ತ್ತಿರುವ ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ, ಮೀಡಿಯಾ ವಿಭಾಗದ ಕಾರ್ಯದರ್ಶಿ,ಸಿದ್ದೀಕ್ ಮಾಂಬ್ಲಿ ಸುಳ್ಯ, ಇವರೆಲ್ಲರೂ ಸಾಕ್ಷಿಯಾದರು.

ವಿಮಾನವು ಮಂಗಳೂರಿಗೆ ತಲುಪಿದೊಡನೆ ಪ್ರಯಾಣಿಕರ ಎಲ್ಲ ರೀತಿಯ ಸೇವೆಗಳ ಉಸ್ತುವಾರಿ ವಹಿಸಿಕೊಂಡು ಸದಾ ಕಾರ್ಯನಿರತರಾಗಿರುವ ರಾಜ್ಯ ಸುನ್ನೀ ನಾಯಕರಾದ ಅಬ್ದುಲ್ ಹಮೀದ್ ಬಜ್ಪೆ, ಅಶ್ರಫ್ ಕಿನಾರ,ಅಬ್ದುಲ್ ರಹಮಾನ್ ಮೊಗರ್ಪಣೆ ಸುಳ್ಯ,ನವಾಝ್ ಸಖಾಫಿ, ಜಬ್ಬಾರ್ ಕಣ್ಣೂರು ಇವರಿಗೆ ಮತ್ತು ಲಗೇಜುಗಳನ್ನು ಸ್ವತಃ ಹೆಗಲಮೇಲೇರಿಸಿ ಹೋಟೆಲ್ ಗಳಿಗೆ ಸಾಗಿಸುವುದರಿಂದ ಹಿಡಿದು ಕ್ವಾರಂಟೈನ್ ಸಮಯದುದ್ದಕ್ಕೂ ಪ್ರಯಾಣಿಕರ ಎಲ್ಲಾ ಅಗತ್ಯತೆಗಳನ್ನು ಕೇಳಿ ತಿಳಿದುಕೊಂಡು ಪರಿಹರಿಸುತ್ತಾ ನಿಸ್ವಾರ್ಥ ಸೇವೆಯಲ್ಲಿ ನಿರತರಾಗಿರುವ SSF ,SYS ನಾಯಕರು ಹಾಗೂ ಅವಿಶ್ರಾಂತ ಕಾರ್ಯಾಚರಣೆ ಮೂಲಕ ಈ ಧ್ಯೇಯವನ್ನು ಸಾಧಿಸುವಲ್ಲಿ ದುಡಿದ ಸಂಘಟನೆಯ ಎಲ್ಲಾ ಕಾರ್ಯಕರ್ತರಿಗೆ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯು ಮನತುಂಹಿ ಅಭಿನಂದನೆ ಸಲ್ಲಿಸುತ್ತಿದೆ ಎಂದು KCF ಒಮಾನ್ ನಾಯಕರು ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.