Breaking News

ಜ್ಞಾನದೀಪ ಕಂಪ್ಯೂಟರ್ ಶಿಕ್ಷಕಿಯರ ತರಬೇತಿ ಸಂಸ್ಥೆಗೆ ಶೇ.100 ಫಲಿತಾಂಶ

Advt_Headding_Middle
Advt_Headding_Middle

ಕರ್ನಾಟಕ ಸರಕಾರದ ಗ್ರಾಮೀಣ ಜನರ ಕೌಶಲ್ಯಾಭಿವೃದ್ಧಿ ಯೋಜನೆಗೆ ಪೂರಕವಾಗಿ ಗ್ರಾಮೀಣ ಕಂಪ್ಯೂಟರ್ ತರಬೇತಿ ಅಕಾಡಮಿಯು 2019-20೦ನೇ ಸಾಲಿನಲ್ಲಿ ನಡೆಸಿದ ಒಂದು ವರ್ಷದ ಕಂಪ್ಯೂಟರ್ ಶಿಕ್ಷಕಿಯರ ತರಬೇತಿಯಲ್ಲಿ ಸುಳ್ಯದ ಜ್ಞಾನದೀಪ ಕಂಪ್ಯೂಟರ್ ಶಿಕ್ಷಕಿಯರ ತರಬೇತಿ ಸಂಸ್ಥೆ ಶೇ.100 ಫಲಿತಾಂಶ ಪಡೆದಿದೆ.

ಪರೀಕ್ಷೆ ಬರೆದ ಎಲ್ಲಾ 5 ವಿದ್ಯಾರ್ಥಿ ಶಿಕ್ಷಕಿಯರುಗಳು ಉತ್ತೀರ್ಣರಾಗಿದ್ದು ರಮ್ಯಾ ಬಿ.ಜಿ, ಕಾವ್ಯಶ್ರೀ, ಹೇಮಲತಾ, ವಿಶಿಷ್ಟ ಶ್ರೇಣಿಯಲ್ಲಿ, ಶೃತಿ ಎ ಮತ್ತು ಕವಿತಾ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಜ್ಞಾನದೀಪ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಳ್ಳಾರೆ ಇದರ ವತಿಯಿಂದ ಗ್ರಾಮೀಣ ಪ್ರದೇಶದ ಯುವ ಜನರ ಕೌಶಲ್ಯಾಭಿವೃದ್ಧಿ ಉತ್ತೇಜನಕ್ಕೆ ಪೂರಕವಾಗಿ ಈ ತರಬೇತಿಯನ್ನು ಯಾವುದೇ ತರಬೇತಿ ಶುಲ್ಕವಿಲ್ಲದೆ ಉಚಿತವಾಗಿ ಆಯೋಜಿಸಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.