Breaking News

ಕಾಂಗ್ರೆಸ್‌ನ ಆರೋಗ್ಯ ಹಸ್ತಕ್ಕೆ ತಾಲೂಕಿನಿಂದ 66 ಜನ ಕೊರೋನಾ ವಾರಿಯರ್ : ಜಯಪ್ರಕಾಶ್ ರೈ

Advt_Headding_Middle
Advt_Headding_Middle

 

ಸುಳ್ಯದ ಸಮಸ್ಯೆಗಳ ನಿವಾರಣೆಯಲ್ಲಿ ನ.ಪಂ. ವಿಫಲ : ಶಶಿಧರ ಎಂ.ಜೆ.

ಕಾಂಗ್ರೆಸ್ ವತಿಯಿಂದ ನಡೆಯುವ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ದೊರೆತ್ತಿದ್ದು, ಈ ಬಗ್ಗೆ ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ಆರೋಗ್ಯ ಹಸ್ತ ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು.


ಕೊರೋನಾ ತಡೆಗೆ ಸರಕಾರದ ಪ್ರಯತ್ನ ಸಾಕಾಗಿರುವುದಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ತಾಲೂಕಿನಲ್ಲಿ ಒಬ್ಬರು ಡಾಕ್ಟರ್ ಮತ್ತು 66 ಜನ ಕಾರ್ಯಕರ್ತರು ಕೊರೋನಾ ವಾರಿಯರ್ ಗಳಾಗಿ ಕೆಲಸ ಮಾಡಲಿದ್ದಾರೆ. ಗ್ರಾಮದಲ್ಲಿ ತಲಾ ಇಬ್ಬರನ್ನು ನೇಮಕಮಾಡಲಾಗಿದ್ದು, ಸುಳ್ಯದಲ್ಲಿ ವೈದ್ಯರಾದ ಡಾ. ರಘುರವರನ್ನು ನೇಮಕ ಮಾಡಲಾಗಿದೆ. ನೇಮಕಗೊಂಡವರಿಗೆ ತರಬೇತಿ, ಪಿಪಿಇ ಕಿಟ್, ಥರ್ಮಸ್ಕ್ರೀನ್, ಮಾಸ್ಕ್, ಪಲ್ಸ್ ಆಕ್ಸಿಮೀಟರ್ ಮುಂತಾದ ಅಗತ್ಯತೆಗಳನ್ನು ಹೊಂದಿರುವ ಕಿಟ್ ನೀಡಲಾಗುತ್ತದೆ. ಅಲ್ಲದೇ ಕೊರೋನಾ ವಾರಿಯರ್‌ಗೆ ೨ ಲಕ್ಷದ ಇನ್ಶೂರೆನ್ಸ್ ಕೂಡ ಇದೆ. ಯಾರಿಗಾದರೂ ಕೊರೋನಾ ವೈರಸ್ ಬಾಧಿತ ಲಕ್ಷ್ಮಗಳು ಕಂಡುಬಂದರೆ ಅವರನ್ನು ಸುಳ್ಯದ ವೈದ್ಯರಲ್ಲಿಗೆ ಕಳುಹಿಸಿಕೊಡಲಾಗುತ್ತದೆ ಎಂದು ವಿವರಿಸಿದರು.

ಸುಳ್ಯ ನಗರದ ಸಮಸ್ಯೆಗಳ ಬಗ್ಗೆ ಮಾತನಾಡಿದ ನಗರ ಕಾಂಗ್ರೆಸ್ ನೂತನ ಅಧ್ಯಕ್ಷ ಶಶಿಧರ ಎಂ.ಜೆ.ರವರು ಸುಳ್ಯದ ಸಮಸ್ಯೆಗಳನ್ನು ನಿವಾರಿಸುವಲ್ಲಿ ನಗರಾಡಳಿತ ಸಂಪೂರ್ಣ ವಿಫಲವಾಗಿದೆ. ನಗರದ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಹಳೆಯ ಕಾಲದ ಶುದ್ಧಿಕರಣ ಘಟಕಗಳಿಂದಲೇ ಈಗಲೂ ನಗರಕ್ಕೆ ನೀರು ಪೂರೈಸಲಾಗುತ್ತಿದೆ. ನಗರದ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ಗಾಂಧಿನಗರದಲ್ಲಿ ಇರುವ ಶುದ್ಧೀಕರಣ ಘಟಕ ರಿಪೇರಿ ಮಾಡಿಲ್ಲ. ನಗರದಲ್ಲಿರುವ ಕಸದ ರಾಶಿಯಿಂದ ಮುಕ್ತಿ ಯಾವಾಗ? ಇಲ್ಲಿಂದಲೇ ಎಲ್ಲಾ ರೋಗಗಳು ಆರಂಭಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಲ್ಚರ್ಪೆ ಬಳಿ ಕಸ ವಿಲೇ ಮಾಡುವಲ್ಲಿ ೩ ಎಕ್ರೆ ಜಾಕವಿರುವ ಬಗ್ಗೆ ನ.ಪಂ.ಅಧಿಕಾರಿಗಳಲ್ಲಿ ಯಾವುದೇ ದಾಖಲೆಗಳಿಲ್ಲ. ಪಯಸ್ವಿನಿ ನದಿಗೆ ಈವರೆಗೂ ಒಂದು ಅಣೆಕಟ್ಟು ಕಟ್ಟಿ ಶಾಶ್ವತ ನೀರಿನ ಪೂರೈಕೆ ಮಾಡಲು ನಗರ ಪಂಚಾಯತ್ ಹಿಂದೆ ಬಿದ್ದದೆ. ಈ ಎಲ್ಲಾ ಸಮಸ್ಯೆಯನ್ನು ನಗರ ಪಂಚಾಯತ್ ಇಂತಿಷ್ಟು ದಿನಗಳೊಳಗೆ ಸರಿ ಮಾಡುವ ಭರವಸೆ ನೀಡದೆ ಈ ಬಗ್ಗೆ ಪಕ್ಷಾತೀತವಾಗಿ ಸಾಹೋರಾಟ ಮಾಡುತ್ತೇವೆ ಎಂದರಲ್ಲದೇ ನಗರ ಪಂಚಾಂiiತ್ ಅಧಿಕಾರಿಗಳು ಕೇವಲ ಹಾರಿಕೆಯ ಉತ್ತರ ನೀಡಿ ಸಮಸ್ಯೆ ಪರಿವಾಗದೇ ಇದ್ದರೆ ಸಾರ್ವಜನಿಕವಾಗಿ ತೀವ್ರ ತರದ ಹೋರಾಟ ನಡೆಸುತ್ತೇವೆ ಎಂದರು.
ನಗರ ಪಂಚಾಯತ್ ಸದಸ್ಯ ಧೀರಾ ಕ್ರಾಸ್ತಾ, ಮಾಧ್ಯಮ ಸಂಯೋಜಕ ಭವಾನಿಶಂಕರ ಕಲ್ಮಡ್ಕ, ವಕ್ತಾರ ನಂದರಾಜ್ ಸಂಕೇಶ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೋಕುಲ್‌ದಾಸ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.