ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮುಂಜಾಗ್ರತಾ ಸಭೆ

Advt_Headding_Middle
Advt_Headding_Middle

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಆ.1 ರಂದು ನಡೆಯುವ ಬಕ್ರೀದ್ ಹಬ್ಬದ ಪ್ರಯುಕ್ತ ಮುಂಜಾಗ್ರತಾ ಕ್ರಮದ ಬಗ್ಗೆ ಸಭೆಯು ಜು.28 ರಂದು ನಡೆಯಿತು.


ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿಯವರು ಮಾತನಾಡಿ ಧಾರ್ಮಿಕ ಆಚರಣೆಗಳಿಗೆ ಯಾವುದೇ ತೊಂದರೆಯಿಲ್ಲ ಆದರೆ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಸರಕಾರ ಆದೇಶಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಕೇವಲ 50 ಜನರು ಸೇರಿಕೊಂಡು ನಮಾಜ್‌ ಕಾರ್ಯ ನಿರ್ವಹಿಸಬೇಕು.
50 ಕ್ಕಿಂತ ಹೆಚ್ಚು ಜನ ಸೇರಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುದು ಎಂದು ಹೇಳಿದರು.

ಸಾಮಾಜಿಕ ಅಂತರ ಕಾಪಾಡಬೇಕು ಮಾಸ್ಕ್ ಕಡ್ಡಾಯ ಹಾಕಲೇಬೇಕು. ಮಸೀದಿಯನ್ನು ಸ್ಯಾನಿಟೈಸ್ ಮಾಡುವುದು, ಮಸೀದಿ ಆವರಣದಲ್ಲಿ ಜನ ಸೇರದೇ ಇರುವ ಹಾಗೆ ನೋಡಿಕೊಳ್ಳುವುದು, ಪರಸ್ಪರ ಆಲಿಂಗನ, ಹಸ್ತಲಾಘವ ಮಾಡಿಕೊಳ್ಳದೆ ಇರುವುದು ಇವುಗಳನ್ನು ಅನುಸರಿಸಿ ಸಮಾಜದ ಮತ್ತು ತಮ್ಮ ಆರೋಗ್ಯದ ರಕ್ಷಣೆಯೊಂದಿಗೆ ಹಬ್ಬವನ್ನು ಆಚರಿಸಿಕೊಳ್ಳುವಂತೆ ಅಲ್ಲದೆ ಹಬ್ಬದ ದಿನ ವೀಡಿಯೋ ಚಿತ್ರೀಕರಣ ಕೂಡ ಮಾಡಲಾಗುವುದು ಎಂದು ಹೇಳಿದರು.
ಬೆಳ್ಳಾರೆ ಠಾಣೆಯ ಎಸ್.ಐ ಆಂಜನೇಯ ರೆಡ್ಡಿಯವರು ಮಾತನಾಡಿ ಸರಿಯಾದ ರೀತಿಯಲ್ಲಿ ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ಬಕ್ರೀದ್ ಹಬ್ಬವನ್ನು ಆಚರಿಬೇಕು.


ಕೆಲವರಲ್ಲಿ ಅಸಡ್ಡೆಗಳಿರುತ್ತದೆ ಆ ರೀತಿ ಆಗದಂತೆ ನೋಡಿಕೊಳ್ಳಬೇಕು ಯಾವುದೇ ಕಾರಣಕ್ಕೂ 50 ಜನ ಮೇಲ್ಪಟ್ಟು ಸೇರಬಾರದು ಎಂದು ಹೇಳಿದರು.
ಅಲ್ಲದೆ ಮಸೀದಿ ಗೇಟಲ್ಲಿ ಸ್ಯಾನಿಟೈಸರ್ ಮತ್ತು ಟೆಂಪರೇಚರ್ ಪರೀಕ್ಷೆ ಮಾಡಬೇಕು.
ಮನೆ ಮನೆ ಭೇಟಿ ನೀಡುವುದು ಕಡಿಮೆ ಮಾಡಬೇಕು.ಆದಷ್ಟು ಜಾಗ್ರತೆಯಿಂದ ಹಬ್ಬವನ್ನು ಆಚರಿಸಿ ಎಂದು ಸಲಹೆ ನೀಡಿದರು.
ಸವಣೂರು ಗ್ರಾ.ಪಂ.ಮಾಜಿ ಸದಸ್ಯ ರಫೀಕ್ ಎಂ.ಎ ಯವರು ನಾವು ಈಗಾಗಲೇ ಒಂದು ಮನೆಯಿಂದ ಒಬ್ಬರನ್ನು ಮಾತ್ರ ಮಸೀದಿಗೆ ಬರಲು ಅವಕಾಶ ನೀಡಿದ್ದೇವೆ.
ಯಾವುದೇ ಕಾರಣಕ್ಕೂ ನಿಯಮಗಳನ್ನು ಮೀರುವುದಿಲ್ಲ.
ನಾವು ಪರಸ್ಪರ ಸಹಕರಿಸಿಕೊಂಡು ಜಾಗ್ರತೆಯಿಂದ ಹಬ್ಬವನ್ನು ಆಚರಿಸುತ್ತೇವೆ ಎಂದು ಹೇಳಿದರು. ನಮ್ಮನಮ್ಮ‌ ಜಮಾಅತ್ ಗಳಲ್ಲಿ ಸಣ್ಣ ಮಕ್ಕಳು ಹಾಗೂ ವಯೋವೃದ್ಧರಿಗೆ ಮಸೀದಿಗೆ ಬಾರದಂತೆ ನಿರ್ದೇಶನ ನೀಡಲಾಗಿದ್ದು, ಸೂಚಿಸಿರುವ ಎಲ್ಲಾ ರೀತಿ ನಿಯಮಗಳನ್ನು ಪಾಲಿಸಿ ಶಾಂತಿಯುತ ಹಬ್ಬ ಆಚರಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕೂರಾ ಮಸೀದಿ ಅಧ್ಯಕ್ಷ ಅಬೂಬಕ್ಕರ್,ಸವಣೂರು ಮಸೀದಿ ಕಾರ್ಯದರ್ಶಿ ಹಾಜಿ ಮಹಮ್ಮದ್,ಐಯೂಬ್ ತಂಬಿನಮಕ್ಕಿ,ಹನೀಫ್ ಇಂದ್ರಾಜೆ,ಖಲಂದರ್ ಬೆಳ್ಳಾರೆ,ಉಮ್ಮರ್ ಪುಂಚತ್ತಾರು,ಅಬ್ದುಲ್ ರಹಿಮಾನ್ ZJM ಬೆಳ್ಳಾರೆ,ಬಾಳಿಲ ಗ್ರಾ.ಪಂ.ಮಾಜಿ ಅಧ್ಯಕ್ಷ ಶರೀಫ್ ಭಾರತ್ ಬಾಳಿಲ, ಅಂಕತ್ತಡ್ಕ ಮಸೀದಿ ಉಪಾಧ್ಯಕ್ಷ ರಜಾಕ್.ಎ.ಆರ್.,ಪಳ್ಳಿಮಜಲು ಸಿರಾಜುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದು ಸಲಹೆಗಳನ್ನು ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.