ಡಾ. ಸುಂದರ ಕೇನಾಜೆಯವರಿಗೆ ಬೀಳ್ಕೊಡುಗೆ

Advt_Headding_Middle
Advt_Headding_Middle

 

ಸುಳ್ಯದಲ್ಲಿ ಶಿಕ್ಷಣ ಸಂಯೋಜಕರಾಗಿದ್ದ ಡಾ. ಸುಂದರ ಕೇನಾಜೆಯವರು ಪುತ್ತೂರಿನ ಕಾರಂತ ಬಾಲವನದ ಆಡಳಿತಾಧಿಕಾರಿ ಇತ್ತೀಚೆಗೆ ನೇಮಕವಾಗಿದ್ದು ಇವರಿಗೆ ಕಛೇರಿ ವತಿಯಿಂದ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಕ್ಷೇತ್ರಶಿಕ್ಷಣಾಧಿಕಾರಿ ಮಹದೇವ ಎಸ್.ಪಿ. ಯವರು ಅಧ್ಯಕ್ಷತೆ ವಹಿಸಿದ್ದರು. ಕಛೇರಿ ವ್ಯವಸ್ಥಾಪಕರಾದ ಸ್ವರ್ಣಲತಾ ಕೆ.ಎನ್., ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಲಕ್ಷ್ಮೀಶ ರೈ ಕೆ., ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ತೀರ್ಥರಾಮ ಹೆಚ್.ಬಿ. ಇವರು ವೇದಿಕೆಯಲ್ಲಿದ್ದರು.

 

ಶಿಕ್ಷಣ ಸಂಯೋಜಕರಾದ ಶ್ರೀಮತಿ ಸಂಧ್ಯಾಕುಮಾರಿ ಬಿ.ಎಸ್. ಸ್ವಾಗತಿಸಿದರು. ಶಿಕ್ಷಣ ಸಂಯೋಜಕರಾದ ವಸಂತ ಏನೆಕಲ್ಲು ಕಾರ್ಯಕ್ರಮ ನಿರೂಪಿಸಿದರು. ಕಛೇರಿಯ ಎಲ್ಲಾ ಅಧಿಕಾರಿ ಸಿಬ್ಬಂದಿಯವರು ಹಾಜರಿದ್ದು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಕ್ಷಣ ಸಂಯೋಜಕರಾಗಿ ಕಛೇರಿಗೆ ಹೊಸದಾಗಿ ಆಗಮಿಸಿದ ಶ್ರೀಮತಿ ನಳಿನಿ ಇವರನ್ನು ಈ ಸಂದರ್ಭದಲ್ಲಿ ಸ್ವಾಗತಿಸಲಾಯಿತು. ಕಛೇರಿಯ ಅಧೀಕ್ಷಕರಾದ ಶಿವಪ್ರಸಾದ್.ಕೆ.ವಿ. ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.