ಎಡಮಂಗಲ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ತಾರಾವತಿ ದೇವಸ್ಯ ಜು.31ರಂದು ಸೇವಾ ನಿವೃತ್ತಿ

Advt_Headding_Middle
Advt_Headding_Middle

 

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ತಾರಾವತಿ.ಎ. ಇವರು ಜುಲೈ 31ರಂದು ಸೇವಾ ನಿವೃತ್ತರಾಗಲಿದ್ದಾರೆ.
ಎಡಮಂಗಲ ಗ್ರಾಮದ ದೇವಸ್ಯ ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ತಿಮ್ಮಪ್ಪ ಗೌಡ ದೇವಸ್ಯರ ಪತ್ನಿಯಾದ ಇವರು ಸುಮಾರು 35 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು.

ಇವರು ಗುತ್ತಿಗಾರು ಗ್ರಾಮದ ಆರ್ನೋಜಿ ಕೃಷ್ಣಪ್ಪ ಗೌಡ ಮತ್ತು ಶ್ರೀಮತಿ ಅಕ್ಕಯ್ಯ ದಂಪತಿಗಳ ಪುತ್ರಿ. ತನ್ನ ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ದೊಡ್ಡತೋಟ, ಪ್ರೌಢ ಶಿಕ್ಷಣವನ್ನು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ, ಪದವಿಪೂರ್ವ ಶಿಕ್ಷಣವನ್ನು ಎಸ್.ಎಸ್.ಕಾಲೇಜು ಸುಬ್ರಹ್ಮಣ್ಯದಲ್ಲಿ ಪಡೆದಿರುತ್ತಾರೆ.

ಸಿ.ಪಿ.ಯಡ್ ತರಬೇತಿಯನ್ನು ಶ್ರವಣಬೆಳಗೊಳದ ಹೇಮಾವತಿ ದೈಹಿಕ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಪಡೆದಿರುತ್ತಾರೆ. 1985 ರಿಂದ ಹರಿಹರಪಲ್ಲತಡ್ಕ ಸ.ಹಿ.ಪ್ರಾ. ಶಾಲೆಯಲ್ಲಿ ೪ ವರ್ಷಗಳ ಸೇವೆ ಸಲ್ಲಿಸಿ, 1989 ರಲ್ಲಿ ಎಡಮಂಗಲ ಸ.ಹಿ.ಪ್ರಾ ಶಾಲೆಗೆ ವರ್ಗಾವಣೆಗೊಂಡು ಸುಮಾರು 31 ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿ ಜುಲೈ 31 ರಂದು ಸೇವಾ ನಿವೃತ್ತರಾಗಲಿದ್ದಾರೆ.
ಇವರ ಹಿರಿಯ ಪುತ್ರಿ ಸುಪ್ರಿಯ ವಿವಾಹವಾಗಿ ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಕಿರಿಯ ಪುತ್ರಿ ಯಶಸ್ವಿನಿ.ಡಿ.ಟಿ, ಎಂ.ಬಿ.ಎ ಪದವೀದರರಾಗಿ ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.