ಸಂಪುಟ ವಿಸ್ತರಣೆ ಮತ್ತು ಅಂಗಾರರಿಗೆ ಸ್ಥಾನ ಮುಖ್ಯಮಂತ್ರಿಗಳ ವಿವೇಚನೆ: ಕಟೀಲ್

Advt_Headding_Middle
Advt_Headding_Middle


ರಾಜ್ಯ ಸಚಿವ ಸಂಪುಟದ ವಿಸ್ತರಣೆ ಮತ್ತು ಸುಳ್ಯ ಶಾಸಕ ಎಸ್. ಅಂಗಾರರಿಗೆ ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿರುವಂತದ್ದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.


ಅವರು ಇಂದು “ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭ ‘ಸುದ್ದಿ’ಗಾರರು ಭೇಟಿಯಾಗಿ ಪ್ರಶ್ನಿಸಿದಾಗ ಹೀಗೆ ಹೇಳಿದ ಅವರು ಅಂಗಾರರಿಗೆ ಸಿಗುವಂತೆ ನಮ್ಮ ಪ್ರಯತ್ನವಿರುತ್ತದೆ” ಎಂದು ಅವರು ಹೇಳಿದರು.
ಈ ಬಾರಿ ಸಂಪುಟ ಪುನಾರಚನೆ ಆಗುವ ಸಾಧ್ಯತೆಯಿಲ್ಲ. ಮೂರು ಸ್ಥಾನಗಳನ್ನು ಭರ್ತಿ ಮಾಡಲಷ್ಟೆ ಸಂಪುಟ ವಿಸ್ತರಣೆ ಸೀಮಿತವಾಗುತ್ತದೆ ಎಂದು ಹೇಳುವುದರ ಮೂಲಕ ಅವರು ಅಂಗಾರರಿಗೆ ಈ ಬಾರಿ ಸ್ಥಾನ ದೊರೆಯಲೆಂದು ಸೂಚ್ಯವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸುಳ್ಯ ಎಪಿಎಂಸಿ ಅಧ್ಯಕ್ ದೀಪಕ್ ಕುತ್ತಮೊಟ್ಟೆ, ಉಪಾಧ್ಯಕ್ಷ ಸಂತೋಷ್ ಜಾಕೆ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಸಿ.ಎ. ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ನ.ಪಂ. ಸದಸ್ಯರುಗಳಾದ ವಿನಯಕುಮಾರ್ ಕಂದಡ್ಕ, ಶಶಿಕಲಾ ನೀರಬಿದಿರೆ, ವಾಣಿಶ್ರೀ ಜಟ್ಟಿಪಳ್ಳ, ಪ್ರವಿತಾ ಪ್ರಶಾಂತ್ ಕಾಯರ್ತೋಡಿ, ಶಿಲ್ಪಾ ಸುದೇವ್, ಕಿಶೋರಿ ಶೇಟ್, ಶೀಲಾ ಕುರುಂಜಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.