ಸುದ್ದಿ ಕಚೇರಿಗೆ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಭೇಟಿ

Advt_Headding_Middle
Advt_Headding_Middle


ವಿಧಾನಪರಿಷತ್ ಸದಸ್ಯರಾದ ಬಳಿಕ ಇದೇ ಪ್ರಥಮ ಬಾರಿಗೆ ಸುಳ್ಯಕ್ಕೆ ಆಗಮಿಸಿದ್ದ ಪ್ರತಾಪ್ ಸಿಂಹ ನಾಯಕ್‌ರವರು ಈ ಸಂದರ್ಭದಲ್ಲಿ ಸುದ್ದಿ ಪತ್ರಿಕಾ ಕಚೇರಿ ಮತ್ತು ಚಾನೆಲ್‌ಗೆ ಭೇಟಿ ನೀಡಿದರು. ಸುದ್ದಿ ಸಮೂಹ ಸಂಸ್ಥೆಯ ಪರವಾಗಿ ಅವರನ್ನು ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ನಾಯಕ್ ಅವರು, ಸುದ್ದಿಯೊಂದಿಗಿನ ನನ್ನ ಆತ್ಮೀಯ ಒಡನಾಟ ದೀರ್ಘ ಕಾಲದ್ದು. ನಾನು ಕೂಡಾ ಸುದ್ದಿ ಕುಟುಂಬದ ಸದಸ್ಯನಿದ್ದಂತೆ. ಪತ್ರಿಕೆ ಮತ್ತು ಮಾಧ್ಯಮ ಇಂದು ಯಾವ ರೀತಿ ಬೆಳೆದಿದೆಯೋ ಅದೇ ರೀತಿ ನಾನೂ ರಾಜಕೀಯದಲ್ಲಿ ಬೆಳೆದಿದ್ದೇನೆ ಎಂದು ಹೇಳಿ ಸಂಸ್ಥೆಗೆ ಶುಭ ಹಾರೈಸಿದರು.


ಸುದ್ದಿ ಬಿಡುಗಡೆ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್‌ರವರು ಪ್ರತಾಪ್‌ಸಿಂಹ ನಾಯಕ್‌ರನ್ನು ಅಭಿನಂದಿಸಿದರು. ಸುದ್ದಿ ಚಾನೆಲ್ ಮತ್ತು ವೆಬ್‌ಸೈಟ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ, ಸುದ್ದಿಯ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ, ಸುದ್ದಿ ಬಳಗದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಗುರುದತ್ ನಾಯಕ್, ಜಿಲ್ಲಾ ಉಪಾಧ್ಯಕ್ಷೆ ಭಾಗೀರಥಿ ಮುರುಳ್ಯ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.