ನಿಷ್ಠೆಯಿಂದ ಕೆಲಸ ಮಾಡಿದವರನ್ನು ಸಂಘಟನೆ ಗುರುತಿಸುತ್ತದೆ : ಎಂ.ಎಲ್.ಸಿ. ಪ್ರತಾಪ್ ಸಿಂಹ ನಾಯಕ್

Advt_Headding_Middle
Advt_Headding_Middle

 

ಲಾಬಿ ಮಾಡಿ ಪಡೆಯುವ ಸ್ಥಾನ ಶಾಶ್ವತವಲ್ಲ : ಶಾಸಕ ಅಂಗಾರ

“ಸಂಘಟನೆಯ ವಿಚಾರಧಾರೆಯಡಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಯಿಂದ ಕೆಲಸ ಮಾಡಿದವರನ್ನು ಸಂಘಟನೆ ಗುರುತಿಸುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ. ಇಂದು ಕೆಲಸ ಮತ್ತು ನಿಮ್ಮೆಲ್ಲರ ಆಶಯದ ಫಲವಾಗಿ ಈ ಜವಾಬ್ದಾರಿ ನನಗೆ ಸಿಕ್ಕಿದೆ” ಎಂದು ಎಂ.ಎಲ್.ಸಿ. ಪ್ರತಾಪ್ ಸಿಂಹ ನಾಯಕ್ ಹೇಳಿದರು.

ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಸುಳ್ಯಕ್ಕೆ ಭೇಟಿ ನೀಡಿದ ಪ್ರತಾಪರನ್ನು ಸುಳ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಭಿನಂದಿಸಲಾಯಿತು.

“ಪ್ರತಾಪರಿಗೆ ಯಾವಗಲೋ ಈ ಸ್ಥಾನ ಸಿಗಬೇಕಿತ್ತು. ಮಿನಿಸ್ಟರ್ ಆಗಬೇಕಿತ್ತು ಎಂದು ಹೇಳಿದವರು ಹಲವರಿದ್ದಾರೆ. ಆದರೆ ನಾವು ಅಪೇಕ್ಷೆ ಪಟ್ಟಿರಲಿಲ್ಲ. ಲಾಬಿ ಮಾಡಿದವರೂ ಅಲ್ಲ. ಸಿಗುವ ಕಾಲ ಬಂದಾಗ ಅದು ಸಿಕ್ಕಿಯೇ ಸಿಗುತ್ತದೆ. ಅಧಿಕಾರ ಯಾವತ್ತೂ ಶಾಶ್ವತ ಅಲ್ಲ. ನಮ್ಮಲ್ಲಿ ಅಧಿಕಾರ ಇಲ್ಲದಾಗಲೂ ಜನ ನಮ್ಮನ್ನು ಗುರುತಿಸುತ್ತಾರಲ್ಲ ಆಗ ನಾವು ಸರಿಯಾದ ದಾರಿಯಲ್ಲೇ ಇದ್ದೇವೆಂದು ಅರ್ಥ” ಎಂದು ಹೇಳಿದರು.

ಅಭಿನಂದನೆ ನೆರವೇರಿಸಿ ಮಾತನಾಡಿದ ಸುಳ್ಯ ಶಾಸಕ ಎಸ್.ಅಂಗಾರರು “45 ವರ್ಷಗಳಿಗೂ ಹೆಚ್ಚು ಕಾಲ ಪ್ರತಾಪರು ಸಂಘಟನೆಯಲ್ಲಿ ಪಕ್ಷದ ವಿಚಾರಕ್ಕೆ ಬದ್ಧರಾಗಿ ತೊಡಗಿಸಿಕೊಂಡವರು. ಯಾವತ್ತೂ ನನಗೆ ಅಧಿಕಾರ ಬೇಕೆಂದು ಕೇಳಿದವರಲ್ಲ. ಇಂದು ತಾನಾಗೇ ಒಲಿದು ಬಂದಿದೆ ಎಂದು ಹೇಳಿದ ಅವರು, ನನಗೆ ಕೆಲವರು ಹೇಳುವುದುಂಟು ನೀವು ಈ ಬಾರಿ ಬಿಡಬಾರದು ಮಂತ್ರಿ ಸ್ಥಾನ ಕೇಳಬೇಕೆಂದು. ಆದರೆ ಲಾಬಿ ಮಾಡಿ ಪಡೆದುಕೊಂಡ ಸ್ಥಾನ ಶಾಶ್ವತವಲ್ಲ. ಅದು ತಾನಾಗೇ ಬರಬೇಕೆಂದು ತಿಳಿದವರು ನಾವು. ಯೋಗ ಇದ್ದರೆ ಎಲ್ಲವೂ ಕೂಡಿ ಬರುತ್ತದೆ. ಪಕ್ಷ ಬೆಳೆಯಬೇಕೆಂದರೆ ನಾವೆಲ್ಲರೂ ಸಂಘಟಿತರಾಗಿ ಮತ್ತಷ್ಟು ಕೆಲಸ ಮಾಡಬೇಕು” ಎಂದು ಹೇಳಿದರು.

ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಅಧ್ಯಕ್ಷತೆ ವಹಿಸಿದ್ದರು., ಸುಳ್ಯ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ಜಿಲ್ಲಾ ಸಮಿತಿ ಪದಾಧಿಕಾರಿ ಎ.ವಿ. ತೀರ್ಥರಾಮ, ತಾ.ಪಂ
ಅಧ್ಯಕ್ಷ ಚನಿಯ ಕಲ್ತಡ್ಕ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಗುರುದತ್ ನಾಯಕ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ವೇದಿಕೆಯಲ್ಲಿ ದ್ದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ಸ್ವಾಗತಿಸಿದರು. ಎ.ವಿ. ತೀರ್ಥರಾಮ ಪ್ರಾಸ್ತಾವಿಕ ಮಾತನಾಡಿದರು. ವಿನಯ್ ಕುಮಾರ್ ಕಂದಡ್ಕ ಕಾರ್ಯಕ್ರಮ ನಿರೂಪಿಸಿದರು. ರಾಕೇಶ್ ರೈ ಕೆಡೆಂಜಿ ವಂದಿಸಿದರು.

ಸಭೆಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ವನ್ನೂ ಆಚರಿಸಲಾಗಿದ್ದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶುಭದಾ ರೈ ಪ್ರತಾಪ್ ಸಿಂಹ ನಾಯಕ್ ರಿಗೆ ರಕ್ಷೆ ಕಟ್ಟಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.