ಆ.5 ರಂದು ಅಯೋಧ್ಯೆಯಲ್ಲಿ‌ ಶಿಲಾನ್ಯಾಸ : ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಶಾಂತಿಸಭೆ

Advt_Headding_Middle
Advt_Headding_Middle

ಆ. 5 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ (ಭೂಮಿ ಪೂಜಾ) ಕಾರ್ಯಕ್ರಮ ಇರುವುದರಿಂದ ಸಾರ್ವಜನಿಕರು ಯಾವುದೇ ರೀತಿಯ ಅತಿರೇಕಕ್ಕೆ ಒಳಗಾಗಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಸನ್ನಿವೇಶಕ್ಕೆ ಮುಂದಾಗಬಾರದು ಎಂದು ಬೆಳ್ಳಾರೆ ಠಾಣಾ ಎಸ್.ಐ.ಆಂಜನೇಯ ರೆಡ್ಡಿ ಹೇಳಿದರು.


ಅವರು ಆ.3 ರಂದು ಸಂಜೆ ಬೆಳ್ಳಾರೆಯ ಅಂಬೇಡ್ಕರ್ ಭವನದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.
ತಾಲೂಕಿನ ದೇವಸ್ಥಾನ ಭಜನಾ ಮಂದಿರಗಳಲ್ಲಿ ಹಾಗೂ ತಮ್ಮ ಮನೆಗಳಲ್ಲಿ ಪೂಜೆ ಮಾಡುವ ಮೂಲಕ ಸಂಭ್ರಮಾಚರಣೆಯನ್ನು ಆಚರಿಸಿಕೊಳ್ಳಬಹುದು. ಆದರೆ ಸರ್ಕಾರದ ನಿಯಮಕ್ಕನುಗುಣವಾಗಿ ಕೇವಲ 50 ಮಂದಿ ಮಾತ್ರ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾಗಿದೆ. ಸಾಮಾಜಿಕ ಅಂತರವನ್ನು ಪಾಲಿಸಿ ಸ್ಯಾನಿಟೈಸರ್ ಗಳನ್ನು ಬಳಸಿ ಸಮಾಜದ ಆರೋಗ್ಯ ದೃಷ್ಟಿಯನ್ನು ಕೂಡ ಕಾಪಾಡಿಕೊಳ್ಳಬೇಕಾಗಿದೆ. ಆ ದಿನದಂದು ಪಟಾಕಿ ಹೊಡೆಯುವುದು, ವಾಹನಗಳಿಗೆ ಧ್ವಜಗಳನ್ನು ಕಟ್ಟಿ ಸುತ್ತಾಡುವುದು, ಬ್ಯಾನರುಗಳನ್ನು ಬಳಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ ಎಂದು ಹೇಳಿದರು.


ಎಲ್ಲರೂ ಪೊಲೀಸರೊಂದಿಗೆ ಸಹಕರಿಸಬೇಕು.ಅಹಿತಕರ ಘಟನೆಗಳು ನಡೆಯಲು ಆಸ್ಪದ ನೀಡಬಾರದು ಎಂದು ಅವರು ಹೇಳಿದರು.
ಸಭೆಯಲ್ಲಿ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಹಲವು ಜನ ಮುಖಂಡರುಗಳು ಭಾಗವಹಿಸಿದ್ದರು.
ಎ.ಎಸ್.ಐ.ಭಾಸ್ಕರ ,ಹೆಡ್ ಕಾನ್ಸ್ ಟೇಬಲ್ ಬಾಲಕೃಷ್ಣ,ಕಾನ್ಸ್ ಟೇಬಲ್ ಮಹದೇವ್ ರವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.