Breaking News

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್‌ರಿಗೆ ಸುಳ್ಯ ರೋಟರಿ ಸಿಟಿ ಇದರ ವತಿಯಿಂದ ಸನ್ಮಾನ

Advt_Headding_Middle
Advt_Headding_Middle

 


ಸುಳ್ಯಕ್ಕೆ ಭೇಟಿ ನೀಡಿದ್ದ ನೂತನ ವಿಧಾನ ಪರಿಷತ್ ಸದಸ್ಯ ಹಾಗೂ ರೋಟರಿ ಜಿಲ್ಲೆ ೩೧೮೧ರ ಝೋನ್ ೪ರ ಅಸಿಸ್ಟೆಂಟ್ ಗವರ್ನರ್ ರೊಟ ಪ್ರತಾಪ್ ಸಿಂಹ ನಾಯಕ್ ಇವರಿಗೆ ಸನ್ಮಾನ ಕಾರ್ಯಕ್ರಮ ಅ.೩ ರಂದು ಸಂತೃಪ್ತಿ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆಯಿತು.
ರೋಟರಿ ಸುಳ್ಯ ಸಿಟಿ ಇದರ ಅಧ್ಯಕ್ಷರಾದ ರೊಟ ಗುರು ವಿಕ್ರಮ್ ಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು. ಜಿಎಸ್‌ಆರ್ ಮೇಜರ್ ಡೋನರ್ ರೊ. ಡಾ. ಕೇಶವ ಪಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಕ್ಲಬ್ ವತಿಯಿಂದ ಪ್ರತಾಪ್ ಸಿಂಹ ನಾಯಕ್‌ರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ತಮ್ಮ ರೋಟರಿ ಮತ್ತು ಸಾರ್ವಜನಿಕ ಸೇವೆಯ ಬಗ್ಗೆ ಅನುಭವಗಳನ್ನು ಹಂಚಿಕೊಳ್ಳುತ್ತಾ, ವಿಧಾನ ಪರಿಷತ್ ಸದಸ್ಯನ ನೆಲೆಯಲ್ಲಿ ಸುಳ್ಯ ರೋಟರಿ ಕ್ಲಬ್ ಗೆ ಬೇಕಾಗುವ ಸಹಾಯ ಹಸ್ತದ ಭರವಸೆ ನೀಡಿದರು.


ಪ್ರಸ್ತುತ ರೊ.ಪ್ರತಾಪ್ ಸಿಂಹ ನಾಯಕ್ ಇವರು ಬೆಳ್ತಂಗಡಿ ರೋಟರಿ ಕ್ಲಬ್‌ನ ಸಕ್ರಿಯ ಸದಸ್ಯರಾಗಿದ್ದಾರೆ.

ಕಾರ್ಯಕ್ರಮದಲ್ಲಿ ಐಪಿಪಿ ರೊ. ಭಾನುಪ್ರಕಾಶ್, ಸದಸ್ಯರುಗಳಾದ ರೊ. ಹೇಮಂತ್ ಕಾಮತ್, ರೊ. ಮುಕುಂದ ನಾರ್ಕೋಡು, ರೊ. ಶಿವಪ್ರಸಾದ್, ರೊ. ಮಧುಕಿರಣ್, ರೊ. ನವೀನ್ ಚಂದ್ರ, ರೊ. ಗೌತಮ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ರೊ| ಗೀರಿಶ್ ನಾರ್ಕೋಡು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.