Breaking News

ನಾ ಕಂಡ ಅಯೋಧ್ಯೆ : ಕಾರಸೇವಕರಾಗಿದ್ದ ಈಶ್ವರ ಗೌಡ ಜಾಲ್ತಾರು ಅನುಭವ ನಿರೂಪಣೆ : ಕವಿತಾ ಎಂ.ಎಲ್.

Advt_Headding_Middle
Advt_Headding_Middle

ನಾ ಕಂಡ ಅಯೋಧ್ಯೆ : ಕಾರಸೇವಕರಾಗಿದ್ದ ಈಶ್ವರ ಗೌಡ ಜಾಲ್ತಾರು ಅನುಭವ ಕಥನ

ಶ್ರೀರಾಮ ಜನ್ಮಭೂಮಿ ಅಯೋಧ್ಯೇ ಭಾರತದ ಪ್ರಾಚೀನ ನಗರಗಳಲ್ಲೊಂದು. ಇದು ಉತ್ತರಪ್ರದೇಶದ ಫೈಜಾಭಾದ್ ‌ಜಿಲ್ಲೆಯಲ್ಲಿದೆ. ಅಯೋಧ್ಯೆಯು ಸರಯೂ ನದಿಯ ತೀರದಲ್ಲಿದ್ದು ರಾಮಯಣದ ನಾಯಕನಾದ ಶ್ರೀರಾಮ ಅಯೋಧೈಯಲ್ಲಿ ಜನ್ಮ ತಾಳಿದ್ದರಿಂದ ಈ ಸ್ಥಳವನ್ನು ರಾಮಜನ್ಮಭೂಮಿ ಎಂದು ಕರೆಯಲಾಗುತ್ತದೆ. ಅಂದು ೧೯೯೨ ಡಿಸೆಂಬರ್ ೬ . ಆ ದಿನ ಭಾರತದ ಇತಿಹಾಸದಲ್ಲಿ ಒಂದು ಮರೆಯಲಾಗದ ಪರಿವರ್ತಿತವಾದ ಘಟನೆಯಾಗಿ ಉಳಿಯಿತು. ಆ ಸಮಯದಲ್ಲಿ ನಾನು ಅಯೋಧ್ಯೇಯಲ್ಲಿ ಕರಸೇವಕನಾಗಿ ಆ ಕಾರ್ಯದಲ್ಲಿ ಪಾಲ್ಗೊಂಡಿದ್ದೆ. ಆ ದೃಶ್ಯವನ್ನುಕಣ್ಣಾರೆ ಕಂಡನುಭವಿಸಿದೆ. ಹೀಗೆ ಸಮಷ್ಟಿಯಾಗಿ ಮಾತ್ರವಲ್ಲ ವ್ಯಕ್ತಿಗತವಾಗಿ ಕೂಡ ನನಗದು ಮರೆಯಲಾಗದ ದಿನವಾಗಿ ಹೋಯಿತು.

ರಾಷ್ಟ್ರೀಯ ಆಂದೋಲನ:-ಮಂಗಳೂರಿನಿಂದ ರೈಲಿನ ಮೂಲಕ ಪ್ರಯಾಣ ಮಾಡಿ ಅಯೋಧ್ಯೆ ತಲುಪಿದೆವು. ಅಲ್ಲಿನ ಜನಸಾಗರ ನೋಡಿ ನಿಜಕ್ಕೂಆಶ್ಚರ್ಯಚಕಿತನಾದೆನು.ದೇಶದೆಲ್ಲೆಡೆಯಿಂದ ಜನ ಸಾಗರವೇ ಹರಿದು ಬಂದಿತ್ತು. ಬಹುಶಃ ಯಾವುದೇ ರಾಜ್ಯಇದಕ್ಕೆ ಹೊರತಾಗಿರಲಿಲ್ಲ. ಅಯೋಧ್ಯೆ ಹೋರಾಟವು ರಾಜಕೀಯವನ್ನು ಮೀರಿದ ಒಂದು ರಾಷ್ಟ್ರೀಯ ಅಂದೋಲನವಾಗಿತ್ತು.ಹೋರಾಟದಲ್ಲಿ ಭಾಗವಹಿಸಿದವರಲ್ಲಿ ವಯಸ್ಸಿನ ಭೇದವಿಲ್ಲದೆ ಮುದುಕ-ಮುದುಕಿಯರು,ಮಕ್ಕಳು,ಯುವಕ-ಯುವತಿಯರು,ಸಾಧು-ಸಂತರು,ಶೈವಸಾಧಕರು ರಾಮಜನ್ಮ ಭೂಮಿಯನ್ನು ಮರಳಿ ಪಡೆದುಕೊಳ್ಳಲು ಅಯೋಧ್ಯೆ ಆಂದೋಲನದಲ್ಲಿ ಪಾಲ್ಗೊಂಡಿದ್ದರು.ಅಯೋಧ್ಯೆ ಹೋರಾಟವು ಭಕ್ತಿಯನ್ನೊಳಗೊಂಡು ಪಂಥಬೇದಗಳನ್ನೊಳಗೊಂಡು ಅದನ್ನು ಮೀರಿದ ಒಂದು ರಾಷ್ಟ್ರೀಯ ಆಂದೋಲನವಾಗಿತ್ತು.

ಶಕ್ತ ಆವೇಶದಿಂದ ಉಧ್ವಸ್ತ:-

ಆ ದಿನ ಅಯೋಧ್ಯೆಯಲ್ಲಿ ಆಕಸ್ಮಿಕವಾಗಿ ಒಂದು ಘಟನೆ ನಡೆಯಿತು. ಆ ದಿನ ವಿವಾದಿತ ಕಟ್ಟಡ ಒಡೆಯುವ ಯೋಚನೆ ಆಯೋಜಕರಲ್ಲಿದ್ದಂತೆ ಕಾಣುತ್ತಿರಲಿಲ್ಲ. ನಾಯಕರೂ ಸೂಚಿಸಿದ್ದ ಸಂಗತಿ ಒಂದೇ ಸರಯೂ ನದಿಯಿಂದ ನೀರು ತಂದು ರಾಮಲಲ್ಲಾನ ಪೂಜೆ-ಭಜನೆ ಮಾಡುವುದಾಗಿತ್ತು. ಸರಯೂ ನದಿ ತೀರದಿಂದ ಮಂದಿರದವರೆಗೂ ಜನರ ಸಾಲು ಬರೋಬ್ಬರಿ ನಿರ್ಮಾಣಗೊಂಡಿತ್ತು. ಇದ್ದಕ್ಕಿದ್ದಂತೆ ಒಂದು ಯುವಕರ ಗುಂಪು ಹೇಗೋ ಸಾಹಸಗೈದು ಆ ಮೂರು ಗುಮ್ಮಟಗಳ ಮೇಲೇರಿ ಬಿಟ್ಟರು.ಬೇರೆ ಬೇರೆ ರಾಜ್ಯದ ನೇತೃತ್ವವನ್ನು ವಹಿಸಿಕೊಂಡಂತಹ ನಾಯಕರು ಅವರ ರಾಜ್ಯದ ಭಾಷೆಯಲ್ಲಿ ದೂರದ ವೇದಿಕೆಯಿಂದ ಆ ಕಟ್ಟಡಕ್ಕೆಯಾವುದೇರೀತಿಯ ಧಕ್ಕೆಯಾಗಕೂಡದು.ಅದು ನಮ್ಮಯೋಜನೆಯೂ ಅಲ್ಲ.ಎಲ್ಲರೂ ದಯವಿಟ್ಟು ಕೆಳಗಿಳಿಯಿರಿ ಎಂದು ಮನವಿಯನ್ನು ಮಾಡಿಕೊಂಡರು. ಯಾರು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.ಆ ಸಮಯಕ್ಕೆಅಲ್ಲಿ ಸೇರಿದ್ದ ಎಲ್ಲ ಕರಸೇವಕರು ಕಟ್ಟಡವನ್ನು  ಕೆಡವುವ ಕಾರ್ಯದಲ್ಲಿ ಪಾಲ್ಗೊಂಡರು. ಒಂದುಕಟ್ಟಡವನ್ನುಒಡೆಯಲು ಬೇಕಾದಯಾವುದೇ ಸೂಕ್ತ ಪರಿಕರಣಗಳು ಯಾರ ಬಳಿಯೂ ಇರಲಿಲ್ಲ ಆದರೆ ಎಲ್ಲ ಕರಸೇವಕರ ಆವೇಶ ಮಾತ್ರ ತಾರಕ್ಕೇರಿತ್ತು. ಎಲ್ಲ ಕರಸೇವಕರ ಆವೇಶ ಇಡೀ ಕಟ್ಟಡವನ್ನೇ ಧ್ವಂಸ ಮಾಡಿಬಿಟ್ಟಿತ್ತು.ಆ ದೃಶ್ಯವನ್ನುಅಲ್ಲಿಗೆ ಬಂದ ಬಹುತೇಕ ಮಂದಿ ಕಣ್ಣಾರೆ ಕಂಡರೂ ನಂಬಲಾಗದ ದೃಶ್ಯ! ಕೆಲವರಿಗೆ ತಪ್ಪಿತಸ್ಥ ಭಾವ ಕೆಲವರಿಗೆ ಸ್ವಾಭಿಮಾನದ ಭಾವ. ಈ ಎರಡು ಭಾವವುಳ್ಳವರೂ ಈ ಅಂದೋಲನದಲ್ಲಿ ಭಾಗಿಯಾಗಿದ್ದರು. ಸೂರ್ಯಾಸ್ತವಾಗುವಾಗ ಬಾಬರ್ ಹೆಸರಿನ ಕಟ್ಟಡ ಪೂರ್ತಿ ಬಿದ್ದುಹೋಗಿತ್ತು.ಪಕ್ಕದಲ್ಲೇ ಒಂದು ತಾತ್ಕಾಲಿಕ ನಿರ್ಮಾಣದಲ್ಲಿ ರಾಮಲಲ್ಲಾ ಪ್ರತಿಷ್ಟಾಪನೆಯಾಗಿದ್ದ.

ಅಯೋಧ್ಯೆಯಲ್ಲಿಹಬ್ಬ;-

ಅಯೋಧ್ಯೆಯಲ್ಲಿ ಪರಿಸ್ಥಿತಿ ಶಾಂತವಾಗಿತ್ತು.ಹಬ್ಬದವಾತವರಣವಿತ್ತು.ಅನೇಕ ಹೋಟೇಲಿಗರು ವ್ಯಾಪಾರನಿಲ್ಲಿಸಿ ಉಚಿತ ಭೋಜನವ್ಯವಸ್ಥೆಯನ್ನು ರೂಪಿಸಿದ್ದರು.

ಈ ಎಲ್ಲಾ ಅನುಭವಗಳನ್ನು ನಿರ್ಮಾಣಕ್ಕಾಗಿ ನಿರ್ಮೂಲನಾ ಕಾರ್ಯದಲ್ಲಿ ಪಾಲ್ಗೊಂಡ ಜಾಲ್ತಾರು ಈಶ್ವರಗೌಡರು ತಮ್ಮ ಮಾತಿನಲ್ಲಿ ಹೇಳಿಕೊಳ್ಳುತ್ತಾ ನಾನು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದು ನನ್ನಜೀವನದ ಅವೀಸ್ಮರಣೀಯಕ್ಷಣ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

 

ನಿರೂಪಣೆ : ಕವಿತಾ.ಎಂ.ಎಲ್.ಎಡಮಂಗಲ
ಪತ್ರೀಕೋದ್ಯಮ ವಿಭಾಗ ವಿವೇಕಾನಂದ
ಕಾಲೇಜು ಪುತ್ತೂರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.