Breaking News

ನೆಲ್ಲೂರು ಕೆಮ್ರಾಜೆ ಸೊಸೈಟಿಯ ಒಂದು ಸ್ಥಾನ ಆಯ್ಕೆ ಹಿನ್ನಲೆ ಉಪಾಧ್ಯಕ್ಷರ ಸಹಿತ ಐದು ನಿರ್ದೇಶಕ ರು ರಾಜೀನಾಮೆ

Advt_Headding_Middle
Advt_Headding_Middle

 

ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಸಹಕಾರಿ ಸಂಘದ ಒರ್ವ ಸದಸ್ಯನ ರಾಜೀನಾಮೆಯಿಂದ ತೆರವಾದ ಸ್ಥಾನವನ್ನು ತುಂಬಲು ಆಡಳಿತದಲ್ಲಿ ಗೊಂದಲ ಉಂಟಾದ ಪರಿಣಾಮ ಉಪಾಧ್ಯಕ್ಷ ರು ಸೇರಿದಂತೆ ಐವರು ನಿರ್ದೇಶಕ ರು ರಾಜೀನಾಮೆ ನೀಡಿದ ಘಟನೆ ಅ.03ರಂದು ನಡೆದಿದೆ.
ಪ್ರಮೋದ್ ಪೈಲೂರು ವೈಯಕ್ತಿಕ ಕಾರಣದಿಂದ ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಈ ಸ್ಥಾನ ತುಂಬಲು ಕೋ- ಆಪ್ಟ್ ಮೂಲಕ ನಿರ್ದೇಶಕರನ್ನು ಆಯ್ಕೆ ಮಾಡುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಅಂದು ಅಧ್ಯಕ್ಷರು ಗೈರಾದ ಕಾರಣ ಆಯ್ಕೆ ಪ್ರಕ್ರಿಯೆ ನಡೆಸಲು ಸಾಧ್ಯವಾಗಿರಲಿಲ್ಲ.
ಇದು ಬಹುಮತದ ಕೊರತೆ ಎದುರಾಗಬಹುದೆಂಬ ಉದ್ದೇಶದಿಂದಲೇ ಅಧ್ಯಕ್ಷರು ಉದ್ದೇಶಪೂರ್ವಕವಾಗಿ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ನಡೆಸಲು ಹಿಂಜರಿಯುತ್ತಿದ್ದಾರೆಂದು ಅಸಮಾಧಾನಗೊಂಡ ಉಪಾಧ್ಯಕ್ಷ ಮಹೇಶ್ ಗಟ್ಟಿಗಾರು, ನಿರ್ದೇಶಕ ರಾದ ಸವಿನ್ ಕೊಡಪಾಲ, ಮಾಧವ ಹರ್ಲಡ್ಕ, ಬಾಬು ಸುಳ್ಳಿ, ಕವಿತಾ ಕಜೆರವರು ಸೊಸೈಟಿ ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದೀಗ ಒಟ್ಟು ಆರು ಜನ ನಿರ್ದೇಶಕ ರು ರಾಜೀನಾಮೆ ಸಲ್ಲಿಸಿದ್ದು, ಆಡಳಿತ ಮಂಡಳಿಯಲ್ಲಿ ಕೋರಂ ಕೊರತೆಯುಂಟಾಗಿ ಬರ್ಖಾಸ್ತುಗೊಳ್ಳುವ ಆತಂಕ ಎದುರಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.