ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ಸುಳ್ಯದಲ್ಲಿ ವಿ.ಹಿಂ. ಪ, ಭಜರಂಗದಳದಿಂದ ಭಜನೆ ಹಾಗೂ ಕರ ಸೇವಕರಿಗೆ ಸನ್ಮಾನ

Advt_Headding_Middle
Advt_Headding_Middle

 

ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿ ಪೂಜೆಯ ಸಂದರ್ಭದಲ್ಲಿ ಸುಳ್ಯದಲ್ಲಿ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ವತಿಯಿಂದ ಭಜನೆ ಹಾಗೂ ಕರ ಸೇವೆಯಲ್ಲಿ ಭಾಗವಹಿಸಿದವರಿಗೆ ಗೌರವ ಕಾರ್ಯಕ್ರಮ ಸುಳ್ಯದ ಶ್ರೀನಿವಾಸ ಪದ್ಮಾವತಿ ಸಭಾಭವನದಲ್ಲಿ ನಡೆಯಿತು.


ಆರ್.ಎಸ್.ಎಸ್. ಪ್ರಮುಖರಾದ ನ.ಸೀತರಾಮರು ಅಯೋಧ್ಯೆಯಲ್ಲಿ ಕರ ಸೇವಕರಾಗಿ ಭಾಗಿಯಾದ ವಿಚಾರದ ಕುರಿತು ಅನುಭವ ಹಂಚಿಕೊಂಡರು.


ಕರ ಸೇವಕರಾಗಿ ಭಾಗವಹಿಸಿದ ಗಣಪತಿ ಭಟ್ ಮಜಿಗುಂಡಿ, ಎನ್.ಎ.ರಾಮಚಂದ್ರ, ಕೇಶವ ಪ್ರಭು ಜಟ್ಟಿಪಳ್ಳ, ದಾಮೋದರ ಮಂಜಿ, ಕರೋಡಿ ಗೋಪಾಲಕೃಷ್ಣ, ಜಿ.ಜಿ. ನಾಯಕ್, ಪ್ರಕಾಶ್ ಶೆಣೈ, ರಾಧಾಕೃಷ್ಣ ಕುಕ್ಕಂದೂರು, ಕುಸುಮಾಧರ ಜಯನಗರ ಮೊದಲಾದವರನ್ನು ಗೌರವಿಸಲಾಯಿತು.


ಬೆಳಗ್ಗೆಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ದುರ್ಗಾಮಾತಾ ಭಜನಾ ಮಂಡಳಿ ಅರಂತೋಡು, ದುರ್ಗಾ ವಾಹಿನಿವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಭಜನೆ ನೆರವೇರಿಸಿದರು
ವಿ.ಹಿಂ.ಪ ತಾಲೂಕು ಅಧ್ಯಕ್ಷ ಸೋಮಶೇಖರ ಪೈಕ, ಭಜರಂಗದಳ ತಾಲೂಕು ಸಂಚಾಲಕ ನಿಕೇಶ್ ಉಬರಡ್ಕ, ಜಿಲ್ಲಾ ಪ್ರಮುಖ್ ಲತೀಶ್ ಗುಂಡ್ಯ ಮೊದಲಾದವರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.