ಪಿರಿಯಾಪಟ್ಟಣದಲ್ಲಿ ಭೀಕರ ರಸ್ತೆ ಅಪಘಾತ ಸುಳ್ಯದ ಕುಂಭಕ್ಕೋಡಿನ ವ್ಯಕ್ತಿ ಮೃತ್ಯು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

BREAKING NEWS

ಮಕ್ಕಳ ಪರೀಕ್ಷೆಗಾಗಿ ಮೈಸೂರಿಗೆ ಹೋಗಿ ಬರುತ್ತಿದ್ದಾಗ ಘಟನೆ

ಮೈಸೂರಿನ ಪಿರಿಯಾಪಟ್ಟಣ ಬೈಲುಕೊಪ್ಪ ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಳ್ಯ ತಾಲೂಕಿನ ಕೋಲ್ಚಾರು ಸಮೀಪದ ಕುಂಭಕ್ಕೋಡಿನ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.

ಆಲೆಟ್ಟಿ ಗ್ರಾಮದ ಕುಂಭಕ್ಕೋಡಿನ ತೀರ್ಥರಾಮ (60 ವರ್ಷ) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದು, ಅವರು ತಮ್ಮ ಮೂವರು ಮಕ್ಕಳೊಂದಿಗೆ ಮೈಸೂರಿಗೆ ತೆರಳಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

Advertisement

ತೀರ್ಥರಾಮ ಅವರು ತಮ್ಮ ಪುತ್ರ ವಾದಿರಾಜ್, ಪುತ್ರಿಯರಾದ ಭಾಗ್ಯಶ್ರೀ ಹಾಗೂ ಭವ್ಯಶ್ರೀ ಅವರೊಂದಿಗೆ ಮೈಸೂರಿಗೆ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತೆರಳಿದ್ದರು. ಪರೀಕ್ಷೆ ಮುಗಿಸಿ ತಮ್ಮ ನ್ಯಾನೋ ಕಾರಿನಲ್ಲಿ ಸುಳ್ಯಕ್ಕೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಪಿರಿಯಾಪಟ್ಟಣದ ಬೈಲುಕೊಪ್ಪ ಎಂಬಲ್ಲಿ ಇವರು ಪ್ರಯಾಣಿಸುತ್ತಿದ್ದ ಕಾರಿಗೆ ವಿರುದ್ದ ದಿಕ್ಕಿನಿಂದ ಬಂದ ಇನ್ನೊಂದು ಕಾರು ರಭಸವಾಗಿ ಢಿಕ್ಕಿ ಹೊಡೆಯಿತೆನ್ನಲಾಗಿದೆ.

 

 

ಕಾರನ್ನು ಪುತ್ರ ವಾದಿರಾಜ್ ಚಲಾಯಿಸುತ್ತಿದ್ದು, ಮುಂಭಾಗದಲ್ಲಿ ಕುಳಿತಿದ್ದ ತೀರ್ಥರಾಮ ಅವರು ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಾರಿನಲ್ಲಿದ್ದ ಅವರ ಮೂವರು ಮಕ್ಕಳಿಗೂ ಗಾಯಗಳಾಗಿದ್ದು, ಪಿರಿಯಾಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಇದೀಗ ಸುಳ್ಯಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ತೀರ್ಥರಾಮ ಅವರು ಕೃಷಿಕರಾಗಿದ್ದು, ಪತ್ನಿ ಶಾಂತಿ, ಪುತ್ರ ವಾದಿರಾಜ್, ಪುತ್ರಿಯರಾದ ಭಾಗ್ಯಶ್ರೀ, ಭವ್ಯಶ್ರೀ, ದಿವ್ಯಶ್ರೀ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.