ಕೊಲ್ಲಮೊಗ್ರು – ಶಿರೂರು – ಬೆಂಡೋಡಿ ರಸ್ತೆ ದುರಸ್ತಿಗೆ ಮನವಿ

Advt_Headding_Middle
Advt_Headding_Middle

ಕೊಲ್ಲಮೊಗ್ರು ಗ್ರಾ.ಪಂ. ವ್ಯಾಪ್ತಿಯ ನಡುಗಲ್ಲು, ಕಲ್ಮಕಾರು ರಸ್ತೆಯಿಂದ ಸಂಪರ್ಕ ಕಲ್ಪಿಸುವ ಶಿರೂರು ಬೆಂಡೋಡಿ ರಸ್ತೆಯು ಇತ್ತೀಚೆಗೆ ಸುರಿದ ಮಳೆಗೆ ರಸ್ತೆ ಸಂಪೂರ್ಣ ಕೊಚ್ಚಿಹೋಗಿದೆ.

ಈ ರಸ್ತೆಯ ಮಲ್ಲಾಜೆ ಎಂಬಲ್ಲಿ ಕಳೆದ ಹಲವು ವರ್ಷಗಳ ಹಿಂದೆ ರಸ್ತೆ ಅಭಿವೃದ್ಧಿಗಾಗಿ ಅಳವಡಿಸಿದ ದೊಡ್ಡ ಗಾತ್ರದ ಜಲ್ಲಿ ಎದ್ದು ಹೋಗಲಾರಂಭಿಸಿದೆ.
ಇದರಿಂದಾಗಿ ವಾಹನ ಸಂಚಾರ ಸೇರಿ ನಡೆದಾಡಲು ಕಷ್ಟಸಾಧ್ಯವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಸೂಕ್ತ ಚರಂಡಿಯಿಲ್ಲದೇ ನೀರೆಲ್ಲ ರಸ್ತೆಯಲ್ಲಿ ಹರಿದು, ರಸ್ತೆ ಸಂಪೂರ್ಣ ಹಾಳಾಗಿದೆ. ಈ ರಸ್ತೆಯು ಬೆಂಡೋಡಿ ಶಾಲೆ, ಕೊರಗರ ಕಾಲನಿ ಸೇರಿದಂತೆ ಇನ್ನಿತರ ಮನೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಈ ರಸ್ತೆಯ ಅಭಿವೃದ್ಧಿಗಾಗಿ ಆ ಭಾಗದ ಜನರು ನಿರಂತರವಾಗಿ ಕಳೆದ ೨೦ ವರ್ಷಗಳಿಂದೀಚೆಗೆ ಮನವಿ ಮಾಡಿಕೊಳ್ಳುತ್ತಿದ್ದರೂ, ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಇದೀಗ ಈ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿಕೊಂಡಿದ್ದಾರೆ.
(ವರದಿ : ದಿನೇಶ್ ಹಾಲೆಮಜಲು)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.