ವಿದ್ಯಾರ್ಥಿನಿ ಚಂದನ ವಾಷ್ಠರ್ ರವರಿಗೆ ಉತ್ತರ ಕರ್ನಾಟಕ ಗೆಳೆಯರ ಬಳಗದಿಂದ ಸನ್ಮಾನ

Advt_Headding_Middle
Advt_Headding_Middle

ಸುಳ್ಯದ ಉತ್ತರ ಕರ್ನಾಟಕ ಗೆಳೆಯರ ಬಳಗದ ವತಿಯಿಂದ ಸುಳ್ಯದ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು . ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಉಮಾದೇವಿ ರವರು ವಹಿಸಿದ್ದರು .ಸಾಮಾಜಿಕ ಕಾರ್ಯಕರ್ತ ಎಂ.ಬಿ ಸದಾಶಿವರವರು ಕಾರ್ಯಕ್ರಮ ಉದ್ಘಾಟಿಸಿದರು . ಸುಳ್ಯದ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ ಬಿ. ಚಂದನ ವಾಷ್ಠರ್ ರವರು ಪಿ ಯು ಸಿ ದ್ವಿತೀಯ ವರುಷದ ವಾಣಿಜ್ಯ ಪರೀಕ್ಷೆಯಲ್ಲಿ 93.33℅ ಅಂಕಗಳನ್ನು ಪಡೆದು ಇಡೀ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುದನ್ನು ಪರಿಗಣಿಸಿ ಚಂದನಾರಿಗೆ ಸುಳ್ಯ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ರಾದ ಶ್ರೀ ಹರೀಶ್ ರವರು ಸನ್ಮಾನ ಕಾರ್ಯಕ್ರಮ ನೆರವೇರಿಸಿ ಶುಭ ಹಾರೈಸಿದರು . ಮುಖ್ಯ ಅತಿಥಿಗಳಾಗಿ ಚಿತ್ರನಟಿ ಶ್ರೀಮತಿ ಸುಜಯ ಕೃಷ್ಣಪ್ಪ , ಜೆಸಿ ಪದಾಧಿಕಾರಿ ಬಶೀರ್ ಯು ಪಿ , ಉ.ಕ ಗೆಳೆಯರ ಬಳಗದ ಉಪಾಧ್ಯಕ್ಷ ರಮೇಶಪ್ಪ ಮೇಸ್ತ್ರಿ , ಕೃಷ್ಣಪ್ಪ ಪಾಲ್ತಾಡು , ನವೀನ ರವರು ವಹಿಸಿದ್ದರು. ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಉಮೇಶ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು . ಉತ್ತರ ಕರ್ನಾಟಕ ಗೆಳೆಯರ ಬಳಗದ ಸಂಚಾಲಕರು ಮತ್ತು ಕಟ್ಟಡ ಕಾರ್ಮಿಕ ಸಂಘದ ಉಪಾಧ್ಯಕ್ಷರು ಹಾಗೂ ಮಂಜು ಕನ್ ಸ್ಟ್ರಕ್ಷನ್ಸ್ ನ ಮಂಜುನಾಥ್ ಮೇಸ್ತ್ರಿ ರವರು ವಂದಿಸಿದರು. ಸಾಹಿತಿ ಮತ್ತು ಜ್ಯೋತಿಷಿ ಎಚ್ .ಭೀಮರಾವ್ ವಾಷ್ಠರ್ ರವರು ಕಾರ್ಯಕ್ರಮ ನಿರೂಪಿಸಿದರು .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.