Breaking News

ಡಿಪ್ಲೋಮಾಗೆ ಆ. 6ರಿಂದ ಆಪ್ಷನ್ ಎಂಟ್ರಿ, ಆ. 28 ಅಂತಿಮ ಮೆರಿಟ್ ಲಿಸ್ಟ್ ಪ್ರಕಟ

Advt_Headding_Middle
Advt_Headding_Middle

 

2020-21 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಥಮ ಸೆಮಿಸ್ಟರ್ ಡಿಪ್ಲೊಮಾ ತರಗತಿಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಆನ್ ಲೈನ್ ನಾನ್ ಇಂಟರ್ಯಾಕ್ಟಿವ್ ಕೌನ್ಸ್ ಲಿಂಗ್ ಪ್ರಕ್ರಿಯೆ ಆ. 6 ರಿಂದ ಪ್ರಾರಂಭವಾಗಲಿದೆ. ವಿದ್ಯಾರ್ಥಿಗಳು ತಾವಾಗಿಯೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ರಾಜ್ಯದ 129 ಸರಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ ರಚಿಸಿರುವ ಸಹಾಯ ಕೇಂದ್ರಗಳಲ್ಲಿ ಪ್ರಾಂಶುಪಾಲರು ಅಥವಾ ಬೋಧಕರ ಸಹಕಾರದೊಂದಿಗೆ ಅರ್ಜಿ ಸಲ್ಲಿಸಬಹುದು. ಪ್ರಥಮ ಸೆಮಿಸ್ಟರ್ ದಾಖಲೆಗಾಗಿ ಆ. 6ರಿಂದ ಆಪ್ಷನ್ ಎಂಟ್ರಿ ಆರಂಭವಾಗಿ ಆ. 22ರ ವರೆಗೂ ಅವಕಾಶವಿರಲಿದ್ದು, ಆ. 24ರಂದು ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಆ. 27 ರ ವರೆಗೆ ಆಕ್ಷೇಪಣೆ ಸಲ್ಲಿಸಲು, ಆಪ್ಷನ್ ಎಂಟ್ರಿ ಬದಲಾವಣೆ ಅಥವಾ ತಿದ್ದುಪಡಿಗೆ ಅವಕಾಶವಿದ್ದು, ಆ. 28 ರಂದು ಅಂತಿಮ ಮೆರಿಟ್ ಲಿಸ್ಟ್ ಪ್ರಕಟಿಸಿ, ಸೆ. 1 ರಂದು ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಲಿದೆ. ಹೆಚ್ಚಿನ ಮಾಹಿತಿಗಾಗಿ http://dtek.karnataka.gov.in ಮತ್ತು www.cetonline.karnataka.gov.in/kea/ ಸಂಪರ್ಕಿಸಬಹುದೆಂದು ಸುಳ್ಯದ ಕೆ.ವಿ.ಜಿ. ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಜಯಪ್ರಕಾಶ್ ಕಲ್ಲುಗದ್ದೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.