ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪಕ್ಕೆ ವಿಶೇಷ ಪ್ಯಾಕೇಜ್ ನೀಡಲು ಟಿ.ಎಂ.ಶಾಹೀದ್ ಒತ್ತಾಯ

Advt_Headding_Middle
Advt_Headding_Middle


ಕೊಡಗು ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು 3  ವರ್ಷಗಳಿಂದಲೂ ಸಂಭವಿಸುತ್ತಿರುವ ಭೂಕುಸಿತದಿಂದಾಗಿ ಅನೇಕ ಹಾನಿ ಸಂಭವಿಸುತ್ತಿದ್ದು ಇದರಿಂದಾಗಿ ಕೊಡಗಿನ ಜನರಲ್ಲಿ ಕೊಡಗಲ್ಲಿ ವಾಸಿಸಲು ಭಯದ ವತಾವರಣ ಉಂಟಾಗಿದೆ. ಜಿಲ್ಲೆಯ ಅನೇಕ ಕಡೆ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ, ನದಿಗಳು ಮತ್ತು ಹೊಳೆಗಳು ಉಕ್ಕಿ ಹರಿಯುತ್ತಿದ್ದು ಕೃಷಿಯಲ್ಲಿ ಹಾನಿ ಸಂಭವಿಸಿದೆ.
ಭಾಗಮಂಡಲದಲ್ಲಿ ಸಂಭವಿಸಿದಂತಹ ಈ ಭೂಕುಸಿತದಿಂದಾಗಿ ಅನೇಕ ರೀತಿಯಲ್ಲಿ ಹಾನಿ ಸಂಭವಿಸಿದ್ದು , ಇದರಿಂದಾಗಿ ಜನರು ಜೀವವನ್ನು, ಮನೆಗಳನ್ನು, ಕೃಷಿ ಭೂಮಿಯನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಸರಕಾರ ಆದಷ್ಟು ಬೇಗ ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಾಗಿದೆ.
ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಸ್ಥಳೀಯ ಅನೇಕ ಮುಖಂಡರು, ಕಾರ್ಯ ಕರ್ತರು ಆರೋಗ್ಯ ಹಸ್ತದ ಯೋಧರು ಜನರ ರಕ್ಷಣೆಗೆ ನಿಂತಿದ್ದು ಜನರ ಹಿತಕ್ಕಾಗಿ ಹೆಚ್ಚಿನ ರೀತಿ ಯಲ್ಲಿ ಉತ್ತಮವಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಸರಕಾರವು ಕೂಡ ಜನರ ಕಷ್ಟಗಳಿಗೆ ಆದಷ್ಟು ಬೇಗ ಸ್ಪಂದಿಸಬೇಕಾಗಿದೆ. ಸರಕಾರವು ಸಾವಿಗೀಡಾದ ಜನರ ಮತ್ತು ಹಾನಿಯಾದ ಮನೆಗಳ ವಿವರವನ್ನು ಕಲೆ ಹಾಕಲು ಕೂಡಲೇ ಅಧಿಕಾರಿಗಳ ತಂಡವನ್ನು ಕಳುಹಿಸಬೇಕು ಹಾಗೂ ಅಪಾಯದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು,ಅಲ್ಲದೆ ಜನರಿಗೆ ಅವಶ್ಯಕವಾದ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ ಜನರಿಗೆ ಯಾದಂತಹ ಕಷ್ಟದಲ್ಲಿ ಭಾಗಿಯಾಗಬೇಕು ಹಾಗೂ ಪ್ರಾಣ ಹಾನಿ ಸಂಭವಿಸಿದಂತ ಕುಟುಂಬಗಳಿಗೆ ತಲಾ ೨೫ ಲಕ್ಷ ಮತ್ತು ಮನೆಗಳನ್ನು ಕಳೆದುಕೊಂಡವರಿಗೆ ತಲಾ ೧೦ ಲಕ್ಷ ಅಲ್ಲದೆ ಕೃಷಿ ಹಾನಿ ಸಂಭವಿಸಿದಂತ ಭೂಮಿಗೆ ೪ ಪಟ್ಟು ಹೆಚ್ಚು ಪರಿಹಾರವನ್ನು ಕೊಟ್ಟು ಸಹಕರಿಸಬೇಕಾಗಿದೆ. ಅಲ್ಲದೆಯೂ ಮನೆ ಕಳೆದು ಕೊಂಡವರಿಗೆ ಪುರ್ನವಸತಿಯ ಸೌಲಭ್ಯವನ್ನು ಅತೀ ಶೀಘ್ರ ದಲ್ಲಿ ನಿರ್ಮಿಸಿಕೊಡಬೇಕಾಗಿದೆ.ಅಲ್ಲದೆ ಪ್ರತೀ ಗ್ರಾಮ ಪಂಚಾಯತಿಗೆ ಹಣವನ್ನು ಬಿಡುಗಡೆ ಮಾಡಬೇಕು. ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಹೆಚ್ಚಿನ ಕಷ್ಟ,ನಷ್ಟ ಸಂಭವಿಸಿದ್ದು ಜನ ಆತಂಕದಲ್ಲಿದ್ದಾರೆ. ಮಳೆಗಾಲ ಮುಂಚಿತವಾಗಿ ಮುನ್ನಚರಿಕಾ ಕ್ರಮವನ್ನು ಸರಕಾರವಾಗಲಿ ಜನ ಪ್ರತಿನಿಧಿಯಾಗಲಿ ಮಾಡದೇ ಇದ್ದುದರಿಂದ ಇಂತಹ ಅನಾಹುತಗಳು ಮರುಕಳಿಸುತ್ತಿದೆ. ಆದುದರಿಂದ ಸರಕಾರ ಇದಕ್ಕೆ ಶಾಶ್ವತ ಪರಿಹಾರವನ್ನು ಕಲ್ಪಿಸಬೇಕು ಎಂದು ಕಾಂಗ್ರೆಸ್ ಮುಖಂಡ ಟಿ.ಎಂ.ಶಹೀದ್ ಅವರು ಒತ್ತಾಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.