ಎಣ್ಮೂರು : ಅಯೋಧ್ಯೆಯ ಕರಸೇವಕರಿಗೆ, ಯುವಬ್ರಿಗೇಡ್ ಕಡಬ ವತಿಯಿಂದ ಸನ್ಮಾನ

Advt_Headding_Middle
Advt_Headding_Middle


ಆಗಸ್ಟ್  5 ರಂದು ಅಯೋಧ್ಯೆಯ ಶ್ರೀರಾಮ ಮಂದಿರದ ಭೂಮಿಪೂಜೆಯ ಸಂದರ್ಭದಲ್ಲಿ ಯುವಬ್ರಿಗೇಡ್ ಕಡಬ ಇದರ 2೦ ಮಂದಿ ಸದಸ್ಯರು ಎಣ್ಮೂರಿಗೆ ಬಂದು ಎಣ್ಮೂರು, ಎಡಮಂಗಲ, ಕಲ್ಮಡ್ಕ ಹಾಗೂ ಮುರುಳ್ಯ ಗ್ರಾಮದಿಂದ 1990 ಹಾಗೂ 1992 ನೇ ಇಸವಿಯಲ್ಲಿ ಅಯೋಧ್ಯೆಗೆ ಹೋಗಿ ಕರಸೇವಕರಾಗಿ ಸೇವೆಗೈದ 31 ಮಂದಿ ಕರಸೇವಕರಲ್ಲಿ 17 ಕರಸೇವಕರನ್ನೂ ಹಾಗೂ ೩ ಮಂದಿ ಕರಸೇವಕರು ದಿವಂಗತರಾಗಿರುವ ಕಾರಣ ಅವರ ಮನೆಯವರನ್ನೂ ಸನ್ಮಾನಿಸಿದರು. ಹಾಗೂ ಅನಾರೋಗ್ಯದಿಂದ ಇರುವ ಕರಸೇವಕರನ್ನು ಅವರ ಮನೆಗಳಿಗೆ ತೆರಳಿ ಸನ್ಮಾನಿಸಿದರು.


ಮಂದಿರದಲ್ಲಿ ಅಂದು ಮಧ್ಯಾಹ್ನ ೧೨.೨೦ರ ಸಮಯದಲ್ಲಿ ಶ್ರೀರಾಮ ದೇವರಿಗೆ ಶಂಖ, ಜಾಗಟೆ ನಾದಗಳೊಂದಿಗೆ ವಿಶೇಷ ಪೂಜೆ ನಡೆಯಿತು. ಬಳಿಕ ಯುವ ಬ್ರಿಗೇಡ್ ಕಡಬದ ಕಾರ್ಯಕರ್ತರು ಕರಸೇವಕರನ್ನು ಶಾಲು, ಸ್ಮರಣಿಕೆ ಮತ್ತು ಗುಲಾಬಿ ಹೂವು ನೀಡಿ ಸನ್ಮಾನಿಸಿ, ಆಶೀರ್ವಾದ ಪಡೆದರು ಮತ್ತು ಕರಸೇವಕರೊಂದಿಗೆ ಅನುಭವಗಳನ್ನು ಹಂಚಿಕೊಂಡರು. ಸಿಹಿತಿಂಡಿ ಹಂಚುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.


ಕರಸೇವಕರಾಗಿ ಸನ್ಮಾನಪಡಕೊಂಡವರ ವಿವರ :
ಕೆ. ಎನ್. ರಘುನಾಥ ರೈ ಕಟ್ಟಬೀಡು ಎಣ್ಮೂರು, ಶ್ರೀಮತಿ ಕೆ. ಶೋಭಾ ರೈ ಕಟ್ಟಬೀಡು ಎಣ್ಮೂರು, ರಮೇಶ್ ಅಡ್ಪಂಗಾಯ ನಿಂತಿಕಲ್ಲು, ಎಣ್ಮೂರು ದಿ| ಕೆ. ವಿಠಲ ಶೆಟ್ಟಿ ಎಣ್ಮೂರುಗುತ್ತು ಇವರ ಪರವಾಗಿ ಮನೆಯವರು, ಶ್ರೀಮತಿ ಕಲ್ಯಾಣಿ ವಿಠಲ ಶೆಟ್ಟಿ ಎಣ್ಮೂರುಗುತ್ತು, ಆನಂದ ಗೌಡ ನೂಜಿ ಆರೆಂಬಿ ಎಣ್ಮೂರು, ದಿ| ಚಂದ್ರಶೇಖರ ಓಣಿಯಡ್ಕ ಅಲೆಂಗಾರ ಎಣ್ಮೂರು ಇವರ ಪರವಾಗಿ ಮನೆಯವರು, ಶ್ರೀಮತಿ ಸುಮ ಓಣಿಯಡ್ಕ ಅಲೆಂಗಾರ ಎಣ್ಮೂರು, ವಾಸುದೇವ ಅಲೆಂಗಾರ ಎಣ್ಮೂರು, ಐಪಳ ಹೊನ್ನಪ್ಪ ಗೌಡ ಹೇಮಳ ಎಣ್ಮೂರು, ದಿ| ಲಕ್ಷ್ಮಣ ಗೌಡ ಹೇಮಳ ಎಣ್ಮೂರು ಇವರ ಪರವಾಗಿ ಮನೆಯವರು, ಶ್ರೀಮತಿ ವೇದಾವತಿ ಲಕ್ಷ್ಮಣ ಗೌಡ ಹೇಮಳ ಎಣ್ಮೂರು, ಬಾಲಕೃಷ್ಣ ಗೌಡ ಅಧ್ಯಾಪಕರು ಹೇಮಳ, ಎಣ್ಮೂರು, ವೇಣುಗೋಪಾಲ ಶೇರ, ಮುರುಳ್ಯ, ವಸಂತ ನಡುಬೈಲು ಮುರುಳ್ಯ, ಕೊರಗಪ್ಪ ಶಾಂತಿನಗರ ಮುರುಳ್ಯ, ಸುಂದರ ಪಾಪುತಡಿ ಮುರುಳ್ಯ, ಕೆ. ಎನ್. ಪರಮೇಶ್ವರಯ್ಯ ಕಾಚಿಲ, ಕಲ್ಮಡ್ಕ, ಲಕ್ಷ್ಮೀನಾರಾಯಣ ನಡ್ಕ, ಕಲ್ಮಡ್ಕ, ಈಶ್ವರ ಗೌಡ ಜಾಲ್ತಾರು, ಎಡಮಂಗಲ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.