ದನ ಸಾಗಾಟ : ಕೊಲೆ‌ ಯತ್ನ ಆರೋಪಿಗೆ ಜಾಮೀನು

Advt_Headding_Middle
Advt_Headding_Middle

 

ದನ ಸಾಗಾಟ ಹಾಗೂ ಕೊಲೆ ಯತ್ನ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿಗೆ ಜಾಮೀನು ದೊರೆತಿದೆ.

ಜು.14 ರಂದು ಆರೋಪಿ ಅಬ್ದುಲ್ ಫಾರೂಕ್ ಎಂಬವರು ತನ್ನ ಪಿಕ್ ಅಪ್ ವಾಹನದಲ್ಲಿ ಎರಡು ದನ ಮತ್ತು ಒಂದು ಕರುವನ್ನು ಹಿಂಸಾತ್ಮಕ ರೀತಿಯಲ್ಲಿ ಪುತ್ತೂರು ಸುಳ್ಯ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಸುಳ್ಯ ಪೊಲೀಸ್ ಠಾಣೆಯ ಸಿಬ್ಬಂದಿಗಳು ಜ್ಯೋತಿ ಸರ್ಕಲ್ ಬಳಿ ಕಾದು ಬಂದ ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಪಿಕ್ ಅಪ್ ವಾಹನದ ಚಾಲಕನು ವಾಹನವನ್ನು ನಿಲ್ಲಿಸದೆ ಸಿಬ್ಬಂದಿಗೆ ತಲವಾರವನ್ನು ತೋರಿಸುತ್ತ ಸಿಬ್ಬಂದಿಯ ಮೇಲೆ ಪಿಕ್ ಅಪ್ ವಾಹನವನ್ನು ಹಾರಿಸಲು ಪ್ರಯತ್ನ ಪಟ್ಟಿದ್ದು ಆ ಸಂದರ್ಭ ಸಿಬ್ಬಂದಿಯವರು ತಪ್ಪಿಸಿಕೊಳ್ಳುವ ಸಮಯ ಮಣ್ಣು ರಸ್ತೆಗೆ ಹಾರಿದ್ದು ಚಾಲಕನು ಪಿಕ್ ಅಪ್ ವಾಹನವನ್ನು ನಿಲ್ಲಿಸದೆ ಮುಂದೆ ಚಲಾಯಿಸಿಕೊಂಡು ಹೋಗಿ ಸುಳ್ಯ

Advertisement

ಜೂನಿಯರ್ ಕಾಲೇಜು ಬಳಿಯಿರುವ ರಸ್ತೆಯೊಂದರಲ್ಲಿ ಪಿಕ್ ಅಪ್ ವಾಹನ ಮತ್ತು ಜಾನುವಾರುವನ್ನು ಬಿಟ್ಟು ಡಯಾನ ಎಂಬವರ ಮನೆಗೆ ಓಡಿಹೋಗಿ ಬಾಗಿಲು ಹಾಕಿಕೊಂಡರು ಎಂದು ಆರೋಪಿಸಲಾಗಿತ್ತು .ಆ ವೇಳೆಗೆ ಪೊಲೀಸರು ಬಂದು ಆತನನ್ನು ಬಂದಿಸಿ ಪಿಕ್ ಅಪ್ ವಾಹನ ಮತ್ತು ಜಾನುವಾರು ಸಮೇತ ಠಾಣೆಗೆ ತೆಗೆದುಕೊಂಡು ಹೋಗಿ ಐ ಪಿ ಸಿ ಸೆಕ್ಷನ್ 353 , 307 , 212 , ಜೊತೆಗೆ 34 ಅಲ್ಲದೆ ಇನ್ನಿತರ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಿ ದಸ್ತಗಿರಿ ಮಾಡಿದ್ದರು . ಬಳಿಕ ಆರೋಪಿಯನ್ನು ಕೊವಿಡ್ ಟೆಸ್ಟ್ ಗೆ ಒಳಪಡಿಸಿದಾಗ ಕೊರೊನ ಪಾಸಿಟಿವ್ ಇರುವುದು ದೃಢವಾಗಿತ್ತು . ಹಾಗಾಗಿ ಅರೋಪಿಯನ್ನು ಕೆಲ ದಿನಗಳ ಕಾಲ ಸುಳ್ಯದ ಸರಕಾರಿ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿಸ್ಥೆಯನ್ನು ನೀಡಿ ಗುಣವಾದ ಬಳಿಕ ಮಂಗಳೂರು ಜೈಲಿಗೆ ರವಾನಿಸಲಾಗಿತ್ತು .ಈ ಮದ್ಯೆ ಅರೋಪಿ ಪರ ಜಾಮಿನು ಅರ್ಜಿಯನ್ನು ಪುತ್ತೂರಿನ 5 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ದಾಖಲಿಸಲಾಗಿ ಅರೋಪಿ ಆ.4 ರಂದು ಷರತ್ತುಬದ್ಧ ಜಾಮಿನು ಆದೇಶವನ್ನು ಮಂಜೂರು ಮಾಡಿದೆ .ಆರೋಪಿಯ ಪರವಾಗಿ ವಕೀಲರಾದ ಎಂ ವೆಂಕಪ್ಪ ಗೌಡ , ರಾಜೇಶ್ ಬಿ ಜಿ ವಾದಿಸಿದ್ದರು .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.