Breaking News

ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜುನ ಪ್ರೊ. ಸುರೇಶ ವಿ.ಯವರಿಗೆ ಡಾಕ್ಟರೇಟ್ ಪದವಿ

Advt_Headding_Middle
Advt_Headding_Middle

ಕೆ.ವಿ.ಜಿ. ತಾ೦ತ್ರಿಕ ಮಹಾವಿದ್ಯಾಲಯದ ಪ್ರೊಫೆಸರ್ ಡಾ. ಸುರೇಶ ವಿ., ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗ ಇವರು ಸಂಶೋಧನೆ ನಡೆಸಿ ಮಂಡಿಸಿದ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾ೦ತ್ರಿಕ ವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇವರು ಮೈಸೂರಿನ ಎಸ್.ಜೆ.ಸಿ.ಇ. ಕಾಲೇಜಿನ ಸಂಶೋಧನಾ ಕೇಂದ್ರದಲ್ಲಿ ಡಾ. ಶಂಕರಯ್ಯ, ವಿಭಾಗ ಮುಖ್ಯಸ್ಥರು, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ಇವರ ಮಾರ್ಗದರ್ಶನದಲ್ಲಿ “Design and implementation of solution to some of the networking problems in heterogeneous wireless networks” ಎಂಬ ವಿಷಯದ ಕುರಿತು ಈ ಮಹಾಪ್ರಬಂಧವನ್ನು ಮಂಡಿಸಿದ್ದರು. ಇವರ ಹಲವಾರು ಪ್ರಬಂಧಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಣೆಗೊಂಡಿದೆ. ಇವರು ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಶ್ರೀಮತಿ ರಾಜಮ್ಮ ಮತ್ತು ಶ್ರೀ ಟಿ. ವೆಂಕಟೇಗೌಡ ದಂಪತಿಗಳ ಪುತ್ರ. ಇವರು ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಳೆದ ೨೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಅಲ್ಲದೆ ಇವರು ಕಳೆದ ೧೦ ವರ್ಷಗಳಿಂದ ಕಾಲೇಜಿನ ಎನ್.ಎಸ್.ಎಸ್. (NSS) ಮತ್ತು ಯೂತ್ ರೆಡ್ ಕ್ರಾಸ್ ಯೂನಿಟ್ ನ ಸಂಯೋಜನಾಧಿಕಾರಿಯಾಗಿರುತ್ತಾರೆ. ಇವರು ತಮ್ಮ ಎಂ.ಟೆಕ್ ಪದವಿಯನ್ನು ಮೊದಲನೇ ರ್‍ಯಾಂಕ್ ಹಾಗೂ ಚಿನ್ನದ ಪದಕದೊಂದಿಗೆ ಕೆ.ವಿ.ಜಿ. ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಪಡೆದಿರುತ್ತಾರೆ. ಇವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ), ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ| ರೇಣುಕಾಪ್ರಸಾದ್ ಕೆ.ವಿ, ನಿರ್ದೇಶಕಿ ಡಾ| ಜ್ಯೋತಿ ಆರ್. ಪ್ರಸಾದ್ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಎ. ಜ್ಞಾನೇಶ್‌ರವರು ಅಭಿನಂದಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.