ಜನರಲ್ಲಿ ಆತಂಕ
ಪೆರುವಾಜೆ ಗ್ರಾಮದ ನಾಗನಮಜಲು ಎಂಬಲ್ಲಿ ಇತ್ತೀಚೆಗೆ ಸುರಿಯುತ್ತಿರುವ ವಿಪರೀತ ಮಳೆಗೆ ರಸ್ತೆಯಲ್ಲಿ ಬೃಹತ್ ಗಾತ್ರದ ಬಿರುಕು ನಿರ್ಮಾಣವಾಗಿದೆ.
ಪರಿಶಿಷ್ಟ ಪಂಗಡದ ಮನೆಗಳಿಗೆ ಸಂಪರ್ಕಿಸುವ ರಸ್ತೆ ಇದಾಗಿದ್ದು ಪಕ್ಕದಲ್ಲಿಯೇ ಗೌರಿಹೊಳೆ ಉಕ್ಕಿ ಹರಿಯುತ್ತಿದೆ.
ಅಲ್ಲಿ ವಾಸಿಸುವ ಜನರಲ್ಲಿ ಆತಂಕ ಉಂಟಾಗಿದ್ದು ಭಯಭೀತರಾಗಿದ್ದಾರೆಂದು ತಿಳಿದುಬಂದಿದೆ.