ಪುಣ್ಚತ್ತಾರಿನಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.8 ರಾತ್ರಿ ನಡೆದಿದೆ.
ಪುಂಚತ್ತಾರು ರಾಮಣ್ಣ ಗೌಡ ಎಂಬವರ ಪುತ್ರಿ ನಳಿನಾಕ್ಷಿ (೩೦) ಎಂಬವರು ಮನೆಯ ಸಮೀಪವಿರುವ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಆ.೯ ರಂದು ಬೆಳಿಗ್ಗೆ ಮನೆಯವರು ಹುಡುಕಾಡಿದಾಗ ನೇಣು ಬಿಗಿದುಕೊಂಡದ್ದು ತಿಳಿದು ಬಂದಿದೆ.
ಬೆಳ್ಳಾರೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದುಬಂದಿದೆ.