Breaking News

ಕೊಲ್ಲಮೊಗ್ರ :ಕೃಷಿ ಭೂಮಿಯೊಳಗೆ ಹೊಳೆ

Advt_Headding_Middle
Advt_Headding_Middle

ಕೊಲ್ಲಮೊಗ್ರ ದೋಲನ ಮನೆ ಎಂಬಲ್ಲಿ ಕೃಷಿ ಭೂಮಿಯ ಸಮೀಪ ಹರಿಯುತ್ತಿದ್ದ   ಹೊಳೆ ದಿಕ್ಕು ಬದಲಿಸಿ ಕೃಷಿ ಭೂಮಿಯಲ್ಲಿ ಹರಿಯುತ್ತಿದೆ. ಆ. 8 ರಂದು ಸುರಿದ ಭಾರಿ ಮಳೆಗೆ ದೋಲನಮನೆ ಜನಾರ್ದನ ಗೌಡರ ಕೃಷಿ ಭೂಮಿಯಲ್ಲಿ ಭಾರಿ ಕುಸಿತ ಕಂಡಿದ್ದು ಭಾರಿ ಗಾತ್ರದ ತೆಂಗಿನ ಮರ ಹೊಳೆ ಪಾಲಾಗಿ ನಾಪತ್ತೆಯಾಗಿದೆ. 2018ರಲ್ಲಿ ಕಲ್ಮಕಾರು ರಕ್ಷಿತಾರಣ್ಯದಲ್ಲಿ ಕುಸಿತಗೊಂಡು ಭಾರಿ ಗಾತ್ರದ ಮರಗಳು ಬಂದು ಹೊಳೆ ಹರಿಯುವ ದಿಕ್ಕನ್ನೇ ಬದಲಿಸಿತು.

ಈ ಕುರಿತು  ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಗೆ ಜನಾರ್ಧನ, ವಿಜಯಕುಮಾರ್, ನಳಿನಿ ಕಳೆದ ವರ್ಷ ತಡೆಗೋಡೆ ರಚಿಸುವಂತೆ ಮನವಿ ನೀಡಿದ್ದರು. ಆದರೆ ಈವರೆಗೂ ಕ್ರಮ ಕೈಗೊಂಡಿಲ್ಲ. ಕೃಷಿಭೂಮಿ ಇನ್ನಷ್ಟು ಹೊಳೆ ಪಾಲಾಗುವ ಆತಂಕದಲ್ಲಿದ್ದು ಈ ಕುರಿತು ಗಮನಹರಿಸಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.