ಅಡ್ಕಾರು: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಜಾರಿದ ಪಿಕಪ್

Advt_Headding_Middle
Advt_Headding_Middle
Advt_Headding_Middle
Advt_Headding_Middle

 

ವರ್ಷದ ಹಿಂದೆ ಸರಣಿ ಅಪಘಾತ ಸಂಭವಿಸಿದ ಸ್ಥಳದಲ್ಲಿ ಮತ್ತೆ ಪೊಲೀಸ್ ಬ್ಯಾರಿಕೇಡ್ ಅನಿವಾರ್ಯ


ಮಂಗಳೂರಿನಿಂದ-ಮೈಸೂರು ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನವೊಂದು ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಜಾರಿ ನಿಂತ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಆ.9ರಂದು ಅಪರಾಹ್ನ ಸಂಭವಿಸಿದೆ.


ಪಿರಿಯಾಪಟ್ಟಣ ಮೂಲದ ಪಿಕಪ್ ವಾಹನ ಮಂಗಳೂರಿನಿಂದ ಹಿಂತಿರುಗುತ್ತಿದ್ದ ವೇಳೆ ಅಡ್ಕಾರು ಮಾವಿನಕಟ್ಟೆ ದಾಟಿ ಮುಂದೆ ಸಿಗುವ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಜಾರಿತಲ್ಲದೆ ಪುನ: ಬಂದ ಬದಿಗೆ ತಿರುಗಿ ನಿಂತಿತು. ಪರಿಣಾಮ ಪಿಕಪ್ ಜಖಂಗೊಂಡಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಅಪಘಾತದ ವಿಷಯ ತಿಳಿದ ಅಡ್ಕಾರಿನ ಶ್ರೀ ಕಾರ್ತಿಕೇಯ ಯುವ ಸೇವಾ ಸಂಘದ ಸದಸ್ಯರುಗಳು ಸೇರಿ ಶ್ರೀ ಕಟೀಲ್ ಲಾರಿಯ ಮಾಲಕ ತೀರ್ಥಪ್ರಸಾದ್ ಅವರಿಗೆ ಕರೆ ಮಾಡಿ ಲಾರಿಗೆ ಹಗ್ಗ ಕಟ್ಟಿ ಪಿಕಪನ್ನು ಎಳೆಯುವಲ್ಲಿ ಸಹಕರಿಸಿದರು.

ಅಡ್ಕಾರಿನಲ್ಲಿ ಕಳೆದ ವರ್ಷ ಇದೇ ಸ್ಥಳದಲ್ಲಿ ಸತತ ಸರಣಿ ಅಪಘಾತಗಳು ಸಂಭವಿಸಿದ್ದು, ಆ ಬಳಿಕ ಪೊಲೀಸ್ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಆದರೆ ಕೊರೊನಾ ಲಾಕ್ ಡೌನ್ ಆದ ಮೇಲೆ ಆ ಸ್ಥಳದಲ್ಲಿದ್ದ ಪೊಲೀಸ್ ಬ್ಯಾರಿಕೇಡ್ ಗಳು ಮಾಯವಾಗಿವೆ. ಇದು ಅಪಘಾತ ವಲಯವಾಗಿದ್ದು , ಈ ಸ್ಥಳದಲ್ಲಿ ಮತ್ತೆ ಪೊಲೀಸ್ ಬ್ಯಾರಿಕೇಡ್ ಗಳನ್ನು ಅಳವಡಿಸಬೇಕಾದ ಅನಿವಾರ್ಯತೆ ಎದುರಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.