ಸಂಪಾಜೆ: ಅಯೋಧ್ಯಾ ಕರಸೇವಕರಿಗೆ ಗೌರವಾರ್ಪಣೆ ಕಾರ್ಯಕ್ರಮ

Advt_Headding_Middle
Advt_Headding_Middle

 

ಸಂಪಾಜೆ  ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಅಯೋಧ್ಯಾ ಕರಸೇವಕರಿಗೆ ಗೌರವಾರ್ಪಣೆ ಕಾರ್ಯಕ್ರಮ  ಆ. 18ರಂದು ನಡೆಸಲಾಯಿತು.

1990 ರಲ್ಲಿ ರಮಾನಂದ ಬಾಳೆಕಜೆ ಅಳಿಕೆ ದಯಾನಂದ, ಯಶೋಧರ ಬಿ ಜೆ,
ಮೋಹನ ಕುಮಾರ್, ಬಾಲಂಬಿ, ವೆಂಕಟರಮಣ ಭಟ್ ಕೊಯನಾಡು, ಗಬ್ಬಲಡ್ಕ ಪುಟ್ಟಣ್ಣ, 1992ರಲ್ಲಿ ಸೇವೆಗೈದ ರಮಾನಂದ ಬಾಳೆಕಜೆ, ಕುಶಾಲಪ್ಪ ಬಾಳೆಕಜೆ, ಪುರುಷೋತ್ತಮ ಕುದುಕ್ಕುಳಿ, ಪುರುಷೋತ್ತಮ ಕುಂಬಾಡಿ, 2001ರ ಕರಸೇವಕರಾದ
ಚಂದ್ರಶೇಖರ ದೇವರಗುಂಡ
ಸುಂದರ ಕಲ್ಲುಗದ್ದೆ
ಕೇಶವ ಪ್ರಸಾದ್ ಬಾಳೆಕಜೆ
ಯೋಗೀಶ ಬಂಟೋಡಿ(ರವಿ)
ರಾಜೇಶ ಬಿ. ಎನ್.ರಿಗೆ
ಈ ಎಲ್ಲಾ ಸಂಪಾಜೆ ಗ್ರಾಮದ ಅಯೋಧ್ಯಾ ಕರಸೇವಕರಿಗೆ ಗೌರವಾರ್ಪಣೆ ಮಾಡಲಾಯಿತು.

ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆದ ಶುಭ ಕಾರ್ಯಕ್ರಮದಲ್ಲಿ ರಕ್ಷಾಬಂಧನ ಹಾಗೂ ಭಜನಾ ಕಾರ್ಯಕ್ರಮ ನಡೆದು ನಂತರ ಅಯೋಧ್ಯೆ ಕರಸೇವಕರನ್ನು ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರಾಜಾರಾಮ್ ಕಳಗಿ, ಹಿರಿಯರು ನಿವೃತ ಸೈನಿಕರಾದ ಮಾಯಿಲಪ್ಪ ಮೂಲ್ಯ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಕುಮಾರ್ ಚೆದ್ಕಾರ್ ಉಪಸ್ಥಿತರಿದ್ದರು. ಇದೇ ವೇಳೆ ಅಯೋಧ್ಯೆ ಕರಸೇವಕಾರಾಗಿ ಭಾಗವಹಿಸಿದ ಬಿ ಜೆ ಯಶೋಧರರವರು ಅಂದಿನ ಅನುಭವವನ್ನು ಹಂಚಿಕೊಂಡರು, ಕಾರ್ಯಕ್ರಮದಲ್ಲಿ ಪರಿವಾರ ಸಂಘಟನೆಯ ಕಾರ್ಯಕರ್ತರು, ಭಜನಾ ಮಂಡಳಿಯ ಸದಸ್ಯರುಗಳು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರುಗಳು, ಹಿಂದೂ ಪರ ಸಂಘಟನೆಯ ಹಿರಿಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.