ಕರ್ನಾಟಕ ಕೇರಳ ಗಡಿ ಪ್ರದೇಶವಾಗಿರುವ ಬಡ್ಡಡ್ಕ ಸಮೀಪದ ಬಾಟೋಳಿ ಎಂಬಲ್ಲಿ ಗುಡ್ಡ ಕುಸಿದಿರುವುದಾಗಿ ತಿಳಿದುಬಂದಿದೆ.
ಕಳೆದ ವರ್ಷ ಇದೇ ಸ್ಥಳದಲ್ಲಿ ಭೂಮಿ ಬಿರುಕು ಬಿಟ್ಟಿತ್ತು. ಈ ಬಾರಿ ಎರಡು ಎಕರೆಯಷ್ಟು ಜಾಗ ಇನ್ನೂರು ಮೀಟರ್ ದೂರಕ್ಕೆ ಗುಡ್ಡ ಜರಿದು ಕೂತಿರುವುದಾಗಿ ತಿಳಿದು ಬಂದಿದೆ. ಎರಡು ಮೀಟರ್ ನಷ್ಟು ಅಗಲದಲ್ಲಿ ಕುಸಿದಿದ್ದು ಪರಿಸರದ ಜನತೆ ಆತಂಕಿತರಾಗಿದ್ದಾರೆ.