Breaking News

ಆಲೆಟ್ಟಿ: ಜತೆಯಾಗಿ ತಿರುಗುತ್ತಿದ್ದ ಅನ್ಯಕೋಮಿನ ಯುವಕ-ಯುವತಿಯನ್ನು ಪ್ರಶ್ನಿಸಿದ ಯುವಕರು

Advt_Headding_Middle
Advt_Headding_Middle

 

ಆಲೆಟ್ಟಿ ಪರಿಸರದಲ್ಲಿ ಜತೆಯಾಗಿ ಹೋಗುತ್ತಿದ್ದ ಜೋಡಿಯನ್ನು ಯುವಕರ ತಂಡ ಪ್ರಶ್ನಿಸಿ ಬಳಿಕ ವಿಷಯ ಆ ಯುವಕ ಹಾಗೂ ಯುವತಿಯ ಮನೆಯವರಿಗೆ ತಿಳಿಸಿ ಅವರನ್ನು ಕರೆಸಿಕೊಂಡು ಮನೆಯವರ ಜತೆ ಕಳುಹಿಸಿಕೊಟ್ಟ ಘಟನೆ ಆ.10ರಂದು ನಡೆದಿದೆ.

ಸುಳ್ಯದ ಜ್ಯೋತಿ ಸರ್ಕಲ್ ಬಳಿ ಕಾರ್ಯಾಚರಿಸುತ್ತಿರುವ ಮಾರ್ಕೆಟಿಂಗ್ ಕಂಪೆನಿಯಲ್ಲಿ ಫಿಲ್ಡ್ ವರ್ಕ್ ಮಾಡುತ್ತಿರುವ ಕುಂಭಕೋಡಿನ ಯುವಕ ಹಾಗೂ ಜಯನಗರದ ಯುವತಿ ಬೆಳಗ್ಗಿನಿಂದ ಆಲೆಟ್ಟಿ ಯಲ್ಲಿ ಒಂದೇ ಕೊಡೆಯಲ್ಲಿ ತಿರುಗಾಡುತ್ತಿದ್ದರೆಂದೂ ಇದನ್ನು ಗಮನಿಸಿದ ಸ್ಥಳೀಯ ಯುವಕರು ಬಜರಂಗದಳ ಕಾರ್ಯಕರ್ತರ ಗಮನಕ್ಕೆ ತಂದರೆನ್ನಲಾಗಿದೆ. ಬಜರಂಗದಳ ಕಾರ್ಯಕರ್ತರು ಅವರಿಬ್ಬರು ಅಟೋ ರಿಕ್ಷಾದಲ್ಲಿ ಸುಳ್ಯಕ್ಕೆ ಬರುತ್ತಿದ್ದ ವೇಳೆ ನಾಗಪಟ್ಟಣ ಸೇತುವೆ ಬಳಿ ರಿಕ್ಷಾವನ್ನು ತಡೆದು ನಿಲ್ಲಿಸಿ ವಿಚಾರಿಸಿದರೆಂದೂ, ಆಗ ಆ ಜೋಡಿ ನಾವು ಸುಳ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದು ಜತೆಯಾಗಿ ಫಿಲ್ಡ್ ವರ್ಕ್ ಮಾಡಲು ಹೋಗಿದ್ದಾಗಿ ಹೇಳಿದರೆಂದೂ ಅವರ ಮಾತಿನಿಂದ ಅನುಮಾನಗೊಂಡ ಯುವಕರು ಈ ಬಗ್ಗೆ ಸತ್ಯ ತಿಳಿಯಲು ಅವರು ಕೆಲಸ ಮಾಡುವ ಸಂಸ್ಥೆಯ ಮಾಲಕರ ಬಳಿಗೆ ಇಬ್ಬರನ್ನು ಕರೆದುಕೊಂಡು ಬಂದರೆನ್ನಲಾಗಿದೆ. ಇವರಿಬ್ಬರೂ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವವರು ಆದರೆ ಇಬ್ಬರನ್ನು ಒಂದೇ ಕಡೆಗೆ ಕಳುಹಿಸಿಲ್ಲ ಎಂದು ಮಾಲಕರು ಹೇಳಿದರೆಂದೂ, ಬಳಿಕ ಇಬ್ಬರ ಮನೆಯವರನ್ನು ಕರೆಸಿ ಬುದ್ದಿ ಮಾತನ್ನು ಹೇಳಿ ಪೋಷಕರ ಜತೆ ಅವರ ಮನೆಗೆ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.