ಅಡ್ಪಂಗಾಯ – ಇರುವಂಬಳ್ಳ – ಪಂಜಿಕ್ಕಲ್ಲು ರಸ್ತೆಯು ಬಹಳ ಜನಪಯೋಗಿ ರಸ್ತೆಯಾಗಿದ್ದು , ಇರುವಂಬಳ್ಳ ಮಸೀದಿಯ ಆಚೆ – ಈಚೆ ಇರುವ ಸುಮಾರು ಒಂದು ಕಿಲೋಮೀಟರ್ ನಷ್ಟು ರಸ್ತೆ ಮಳೆಯ ನೀರು ರಸ್ತೆಯ ಮದ್ಯೆ ಹರಿದು ತೀರಾ ಹದಗೆಟ್ಟಿತ್ತು.
ಎಸ್ ವೈ ಎಸ್ ಇರುವಂಬಳ್ಳ ಬ್ರಾಂಚ್ ಹಾಗು ಎಸ್ ಎಸ್ ಎಫ್ ಇರುವಂಬಳ್ಳ ಶಾಖೆ ಇದರ ಕಾರ್ಯಕರ್ತರು ಸೇರಿಕೊಂಡು ಶ್ರಮದಾನದ ಮೂಲಕ ಈ ಹಿಂದೆ ಸುಮಾರು ಅರ್ಧ ಕಿಲೋಮೀಟರ್ ನಷ್ಟು ರಸ್ತೆಯ ಒಂದು ಬದಿಯಲ್ಲಿ ಕಣಿ ತೆಗೆದು , ರಸ್ತೆ ಮದ್ಯೆ ಉಂಟಾಗಿದ್ದ ಹೊಂಡ ಗುಂಡಿಗಳಿಗೆ ಕಲ್ಲುಗಳನ್ನು ತಂದು ಹಾಕಿ ಮುಚ್ಚಿ ಸರಿಪಡಿಸಿದ್ದರು.
ಇದೀಗ ಆಗಸ್ಟ್ 12 ಮತ್ತೊಮ್ಮೆ ಇದೇ ಸಂಘಟನೆಯ ಕಾರ್ಯಕರ್ತರು ಶ್ರಮದಾನದ ಮೂಲಕ ಇರುವಂಬಳ್ಳದ ಪುಳಿಯಡಿಯಿಂದ ಮೈತ್ತಡ್ಕ ದವರೆಗಿನ ರಸ್ತೆಯ ಎರಡೂ ಬದಿಯಲ್ಲಿ ಇದ್ದ ಕಾಡುಗಳನ್ನು ಕಡಿದು ಸ್ವಚ್ಚಗೊಳಿಸಿದರು.