ಸಂಘದ ಅಧ್ಯಕ್ಷ ಎಸ್.ಎನ್ .ಮನ್ಮಥರಿಂದ ಗ್ರಾಹಕರಿಗೆ ಯಂತ್ರ ಹಸ್ತಾಂತರ
ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಅಡಿಕೆ ಕೊಯ್ಲು ಮತ್ತು ಔಷಧಿ ಸಿಂಪಡಿಸಲು ಮರ ಏರುವ ಯಂತ್ರದ ಪ್ರಾತ್ಯಕ್ಷಿಕೆ ಆ.13 ರಂದು ನಡೆಯಿತು.
ಸಹಕಾರಿ ಸಂಘದ ಸಮೀಪವಿರುವ ಜ್ಯೋತ್ಸ್ನಾ ಪಾಲೆಪ್ಪಾಡಿಯವರ ಅಡಿಕೆ ತೋಟದಲ್ಲಿ ಅಡಿಕೆ ಮರಕ್ಕೆ ಯಂತ್ರದ ಮೂಲಕ ಏರಿ ಪ್ರಾತ್ಯಕ್ಷಿಕೆ ನಡೆಯಿತು.
ಶಿವಮೊಗ್ಗದ ಮಬೆನ್ಸ್ ಇಂಜಿನೀಯರಿಂಗ್ ಸೊಲ್ಯೂಷನ್ ಕಂಪೆನಿಯ ಸಿಬ್ಬಂದಿಗಳು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಗ್ರಾಮದ ಕೃಷಿಕರು ಕೂಡಾ ಯಂತ್ರದ ಮೂಲಕ ಮರ ಏರಿ ತಮ್ಮ ಅನುಭವವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ,ಉಪಾಧ್ಯಕ್ಷ ವಿಕ್ರಂ ಪೈ, ನಿರ್ದೇಶಕರು,ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್,ಗ್ರಾಮ ಲೆಕ್ಕಾಧಿಕಾರಿ ಕಾರ್ತಿಕ್,ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ ಮತ್ತು ಸದಸ್ಯರು ಹಾಗೂ ನೂರಾರು ಜನ ಕೃಷಿಕರು ಉಪಸ್ಥಿತರಿದ್ದು ಪ್ರಾತ್ಯಕ್ಷಿಕೆ ವೀಕ್ಷಿಸಿದರು.
ಯಂತ್ರ ಹಸ್ತಾಂತರ : ಮೊದಲ ಯಂತ್ರದ ಗ್ರಾಹಕರಾದ ಅಚ್ಚುತ ಗೌಡ ಕುದುಂಗು ರವರಿಗೆ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ಯಂತ್ರವನ್ನು ಹಸ್ತಾಂತರಿಸಿದರು.