ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿದ್ದ ಸುಳ್ಯ ದ ತಾರನಾಥರಿಗೆ ಎ.ಎಸ್.ಐ. ಆಗಿ ಮುಂಭಡ್ತಿ ದೊರೆತಿದ್ದು ಅವರು ಮಂಗಳೂರು ಜಿಲ್ಲಾ ಗುಪ್ತ ವಾರ್ತೆ ವಿಭಾಗಕ್ಕೆ ವರ್ಗಾವಣೆ ಗೊಂಡಿದ್ದಾರೆ.
1993ರಲ್ಲಿ ಕಾನ್ ಸ್ಟೇಬಲ್ ಆಗಿ ಪೋಲೀಸ್ ಇಲಾಖೆ ಸೇರಿದ ತಾರಾನಾಥರು ಆರಂಭದಲ್ಲಿ ಮಂಗಳೂರಿನ ಉರ್ವ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದರು. ಬಳಿಕ ಬಂದರು ಠಾಣೆ, ರೌಡಿ ನಿಗ್ರಹದಳದಲ್ಲಿ ಸೇವೆ ಸಲ್ಲಿಸಿ ಸುಳ್ಯಕ್ಕೆ ವರ್ಗಾವಣೆಯಾಗಿ ಬಂದರು. 2012ರಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಪದೋನ್ನತಿಗೊಂಡು ಕಡಬಕ್ಕೆ ವರ್ಗಾವಣೆ ಯಾದರು. ಅಲ್ಲಿಂದ ಸುಬ್ರಹ್ಮಣ್ಯ ಠಾಣೆಗೆ ಬಂದ ಇವರು ಇದೀಗ ಎ.ಎಸ್.ಐ. ಆಗಿ ಪದೋನ್ನತಿಗೊಂಡಿದ್ದಾರೆ.
ಪ್ರಸ್ತುತ ಕೇರ್ಪಳ ನಿವಾಸಿಯಾಗಿರುವ ಇವರು ನಿವೃತ್ತ ಅಂಚೆ ಪಾಲಕ ಸೀತಾರಾಮ – ಜಲಜ ದಂಪತಿಯ ಪುತ್ರ. ಪತ್ನಿ ಶ್ರೀಮತಿ ಸವಿತ ಗೃಹಿಣಿಯಾಗಿದ್ದಾರೆ. ಪುತ್ರ ಧನುಷ್ ಟಿ ಈ ಬಾರಿ ಪಿಯುಸಿ ತೇರ್ಗಡೆಗೊಂಡಿದ್ದು, ಇನ್ನೋರ್ವ ಪುತ್ರ ಚಿರಾಗ್ ಟಿ 7 ನೇ ತರಗತಿಯಲ್ಲಿ ಓದುತ್ತಿದ್ದಾರೆ.