ಸುಬ್ರಹ್ಮಣ್ಯ : ಧ.ಗ್ರಾ.ಯೋ. ವತಿಯಿಂದ ಅನುಷ್ ಗೆ ಸನ್ಮಾನ

Advt_Headding_Middle
Advt_Headding_Middle

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸುಬ್ರಮಣ್ಯ, ಏನೆಕಲ್ಲು ಒಕ್ಕೂಟದ ವತಿಯಿಂದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಗ್ರಾಮೀಣ ಪ್ರತಿಭೆ ಅನುಷ್ ಗೆ ಅಭಿನಂದನಾ ಕಾರ್ಯಕ್ರಮ ಸುಬ್ರಹ್ಮಣ್ಯ ಗ್ರಾ.ಪಂ. ಸಭಾಭವನದಲ್ಲಿ ಇಂದು ನಡೆಯಿತು.

ವಲಯ ಮೇಲ್ವಿಚಾರಕರಾದ ಸೀತಾರಾಮ, ಒಕ್ಕೂಟದ ಅಧ್ಯಕ್ಷ ತೇಜಕುಮಾರ್, ತುಳುನಾಡ ರಕ್ಷಣ ವೇದಿಕೆಯ ಕಾರ್ಯದರ್ಶಿ ಸುರೇಶ್ ಉಜಿರಡ್ಕ ಅವರುಗಳಿದ್ದು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅನುಷ್ ರವರ ತಂದೆ ಲೋಕೇಶ್ ಎಣ್ಣೆಮಜಲು, ಪತ್ರಕರ್ತರಾದ ರತ್ನಾಕರ ಎಸ್, ಲೋಕೇಶ್ ಬಿ.ಎನ್., ಗ್ರಾ.ಪಂ ಸಿಬ್ಬಂದಿಗಳಾದ ರಘು ಬಿ.ಎನ್, ಲೊಕೇಶ್ ಏನೆಕಲ್ಲು, ಆನಂದ ಕಲ್ಲುಪಣೆ, ರಾಮಚಂದ್ರ ಏನೆಕಲ್ಲು, ಒಕ್ಕೂಟದ ಪದಾಧಿಕಾರಿಗಳಾದ ಗುರುಪ್ರಸಾದ್ ದೇವರಗದ್ದೆ, ಶೈಲಜಾ, ಜಯಶ್ರೀ, ಲಲಿತ, ಪವಿತ್ರಾ, ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಸೇವಾ ಪ್ರತಿನಿಧಿ ಹರಿಣಾಕ್ಷಿ ಸ್ವಾಗತಿಸಿದರು. ಏನೆಕಲ್ಲು ಸೇವಾ ಪ್ರತಿನಿಧಿ ತಾರಾ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.