ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ “ಆಟಿಡೊಂಜಿ ದಿನ”

Advt_Headding_Middle
Advt_Headding_Middle

ಉಪನ್ಯಾಸ ಹಾಗೂ ಭತ್ತ ಬೆಳೆಗಾರ ಎಸ್.ಮಾಲಪ್ಪ ಗೌಡರಿಗೆ ಸನ್ಮಾನ ಕಾರ್ಯಕ್ರಮ

ಜೇಸಿಐ ಸುಳ್ಯ ಪಯಸ್ವಿನಿ ಮತ್ತು ಜೇಸಿರೆಟ್ ಹಾಗೂ ಯುವ ಜೇಸಿ ವಿಭಾಗದ ವತಿಯಿಂದ ೧೩ನೇ ಆಗಸ್ಟ್ 2020ನೇ ಗುರುವಾರ, “ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್” ಶ್ರೀರಾಂಪೇಟೆ ಸುಳ್ಯ ಇಲ್ಲಿ “ಆಟಿಡೊಂಜಿ ದಿನ” – ಆಟಿ ತಿಂಗಳ ಮಹತ್ವದ ಬಗ್ಗೆ ಉಪನ್ಯಾಸ ಹಾಗೂ ಸಾಂಪ್ರದಾಯಿಕ ಭತ್ತ ಬೆಳೆಗಾರರಾದ ಶ್ರೀ ಎಸ್. ಮಾಲಪ್ಪ ಗೌಡ ಸೂಂತೋಡು ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ನೆಹರೂ ಸ್ಮಾರಕ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಾಧಿಕಾರಿಯೂ ಆಗಿರುವ ರೊ| ಪ್ರೋ. ಸಂಜೀವ ಕುದ್ಪಾಜೆಯವರು ಆಟಿ ತಿಂಗಳಲ್ಲಿ ನಡೆಯುವ ಸಾಂಪ್ರದಾಯಿಕ ತಿಂಡಿ-ತಿನಸುಗಳು ಹಾಗೂ ಅದರ ಮಹತ್ವ, ಆಟಿಯ ವಿಶೇಷತೆಗಳು ಹಾಗೂ ನಂಬಿಕೆಗಳು ಕುರಿತಂತೆ ಯುವ ಪೀಳಿಗೆಗೆ ತಿಳುವಳಿಕೆ ಮೂಡಿಸಿ ಸುದೀರ್ಘ ಉಪನ್ಯಾಸಗೈದರು.
ಇದೇ ಸಂದರ್ಭದಲ್ಲಿ ಇಂದಿಗೂ ಸ್ವಾಭಿಮಾನಿಯಾಗಿ ಸ್ವಾವಲಂಬಿ ಬದುಕು ಸಾಗಿಸುತ್ತಿರುವ ಸಾಂಪ್ರದಾಯಿಕ ಪದ್ಧತಿಯ ಭತ್ತ ಬೆಳೆಯುತ್ತಿರುವ 80 ವರ್ಷದ ಹಿರಿಯ ರೈತ ಶ್ರೀಯುತ ಮಾಲಪ್ಪ ಗೌಡ ಸೂಂತೋಡು ಇವರನ್ನು ಜೇಸಿಐ ಸುಳ್ಯ ಪಯಸ್ವಿನಿಯ ನೇತೃತ್ವದಲ್ಲಿ ಗಣ್ಯ ಅತಿಥಿಗಳಿಂದ ಸನ್ಮಾನಿಸಲಾಯಿತು.
2019-20 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಯುವ ಜೇಸಿಗಳನ್ನು ಮತ್ತು ಘಟಕದ ಪೂರ್ವಾಧ್ಯಕ್ಷರುಗಳ ಮಕ್ಕಳನ್ನು ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರಾದ ದಿನೇಶ್ ಮಡಪ್ಪಾಡಿ, ನ್ಯಾಯವಾದಿಗಳು ಸುಳ್ಯ, ಗೌರವ ಉಪಸ್ಥಿತರಾಗಿ ಜೇಸಿಐ ಸುಳ್ಯ ಸಿಟಿ ಇದರ ಅಧ್ಯಕ್ಷರಾದ JC ವಿನಯರಾಜ್ ಮಡ್ತಿಲ ಮತ್ತು ರವಿ ಅಕ್ಕೋಜಿಪಾಲ್ ಇವರುಗಳು ಉಪಸ್ಥಿತರಿದ್ದರು.
ಜೇಸಿಐ ಸುಳ್ಯ ಪಯಸ್ವಿನಿಯ ಅಧ್ಯಕ್ಷರಾದ JC ದೇವರಾಜ್ ಕುದ್ಪಾಜೆರವರು ಸಭಾಧ್ಯಕ್ಷತೆಯನ್ನು ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. JC ರಂಜಿತ್ ಕುಕ್ಕೇಟ್ಟಿ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿ, ಯುವ ಜೇಸೀ ಅಧ್ಯಕ್ಷ ಚಿತ್ತಾರ ಬಂಟ್ವಾಳ್ ಜೇಸಿವಾಣಿ ವಾಚಿಸಿದರು. ಸ್ಥಳಾವಕಾಶವನ್ನು ಒದಗಿಸಿದ ಘಟಕದ ಪೂರ್ವಾಧ್ಯಕ್ಷರಾದ ಎಅ ಜಯಪ್ರಕಾಶ್ ಕೆ. ರವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಜೇಸೀರೆಟ್ ಅಧ್ಯಕ್ಷೆ ಚೈತನ್ಯ ದೇವರಾಜ್ ಸನ್ಮಾನಿತರ ಪರಿಚಯ ಪತ್ರವನ್ನು ಓದಿದರು ಹಾಗೂ ಕಾರ್ಯಕ್ರಮ ನಿರ್ದೇಶಕ ಎಅ ಚೇತನ್ ಚಿಲ್ಪಾರು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.